ಚಂದ್ರಶಿಕಾರಿಯತ್ತ ಇಸ್ರೋ| ಇಂದು ಮಧ್ಯಾಹ್ನ ಚಂದ್ರಯಾನ-3

ಸಮಗ್ರ ನ್ಯೂಸ್: ಚಂದ್ರನ ಕುರಿತ ಹಲವು ಮೊದಲುಗಳನ್ನು ಮೊದಲ ಚಂದ್ರಯಾನದಲ್ಲಿ ಜಗತ್ತಿಗೆ ಬಿತ್ತರಿಸಿದ್ದ ಭಾರತ, ಇದೀಗ ಮತ್ತಷ್ಟು ಪ್ರಥಮಗಳನ್ನು ಸಾಧಿಸಲು ಮೂರನೇ ಬಾರಿಗೆ ಚಂದ್ರನ ಸವಾರಿ ಹೊರಟಿದೆ. ದೇಶದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಉಡಾವಣೆಗೆ ಗುರುವಾರ ಮಧ್ಯಾಹ್ನದಿಂದ ಕ್ಷಣಗಣನೆ ಆರಂಭವಾಗಿದೆ.

Ad Widget ... ..

ಶುಕ್ರವಾರ ಮಧ್ಯಾಹ್ನ ಉಡಾವಣೆ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಯೋಜನೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಇಂತಹ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಈವರೆಗೆ ಅಮೆರಿಕ, ಚೀನಾ ಮತ್ತು ರಷ್ಯಾ ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹವನ್ನು ಲ್ಯಾಂಡ್ ಮಾಡಿವೆ.

Ad Widget

ಇಸ್ರೋದ ಶ್ರೀಹರಿಕೋಟ ನೆಲೆಯಿಂದ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಉಡಾವಣೆ ಆಗಲಿದೆ. ಕ್ಷಣಗಣನೆ ಪ್ರಾರಂಭವಾಗಿರುವ ವಿಡಿಯೋವನ್ನು ಇಸ್ರೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಚಂದ್ರಯಾನ-3 ಮೂಲಕ ಇಸ್ರೋ ರೋವರ್ ಚಂದ್ರನ ಮೇಲ್ಮೈಯ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.

ಚಂದ್ರಯಾನ-2 ಏನಾಗಿತ್ತು?: 2019ರಲ್ಲಿ ಚಂದ್ರಯಾನ-2 ಯೋಜನೆ ಕೈಗೊಳ್ಳಲಾಗಿತ್ತು. ಎಲ್ಲ ಪ್ರಕ್ರಿಯೆಗಳೂ ಸರಿಯಾಗಿಯೇ ನಡೆದಿದ್ದವು. ಆದರೆ ಚಂದ್ರನ ಮೇಲೆ ರೋವರ್ ಇಳಿಯುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ನಿಯಂತ್ರಣ ಕೇಂದ್ರದ ಜತೆ ಸಂಪರ್ಕ ಕಡಿದುಕೊಂಡು ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ.

ಯೋಜನೆ ಗುರಿ ಏನು?
ಲ್ಯಾಂಡರ್​ನಿಂದ ರೋವರ್ ಹೊರಬರುವುದು ಸೇರಿ ವಿವಿಧ ಸಾಮರ್ಥ್ಯ ವಿಶ್ವಕ್ಕೆ ಪ್ರದರ್ಶಿಸುವುದು
ಚಂದ್ರನ ಮೇಲ್ಮೈಯಲ್ಲಿ ರೋವರ್​ನ ಸಾಫ್ಟ್ ಲ್ಯಾಂಡಿಂಗ್
ರೋವರ್​ನಲ್ಲಿರುವ ವಿವಿಧ ತಾಂತ್ರಿಕ ಸಾಧನಗಳ ಮೂಲಕ ಚಂದ್ರನ ಮೇಲ್ಮೈ ಅಧ್ಯಯನ
ತಿರುಪತಿಯಲ್ಲಿ ಪೂಜೆ: ಚಂದ್ರಯಾನ-3 ಪ್ರತಿಕೃತಿಯೊಂದಿಗೆ ಇಸ್ರೋ ವಿಜ್ಞಾನಿಗಳ ತಂಡ ಗುರುವಾರ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ ಯೋಜನೆಯ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿತು. ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಬಟ್ವುಡೇಕರ್ ಸೇರಿ ಹಲವು ವಿಜ್ಞಾನಿಗಳು ತಂಡದಲ್ಲಿದ್ದರು.

Leave a Comment

Your email address will not be published. Required fields are marked *