ಕರ್ತವ್ಯದ ವೇಳೆ ಹಸಿರು ಟೋಪಿ ಧರಿಸಿದ ಬಿಎಂಟಿಸಿ ಕಂಡಕ್ಟರ್| ಮಹಿಳೆಯಿಂದ‌ ಕಂಡಕ್ಟರ್ ಗೆ ಕ್ಲಾಸ್

ಸಮಗ್ರ ನ್ಯೂಸ್: ಬಿಎಂಟಿಸಿ ಬಸ್‌ನಲ್ಲಿ ಕಂಡಕ್ಟರ್‌ ಆಗಿರುವ ಮುಸ್ಲಿಂ ವ್ಯಕ್ತಿ, ಕರ್ತವ್ಯದ ವೇಳೆ ಹಸಿರು ಬಣ್ಣದ ಟೋಪಿ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನು ಮಹಿಳೆಯೊಬ್ಬರು ಪ್ರಶ್ನಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Ad Widget ... ..

ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರವೇ ಸಮವಸ್ತ್ರ ನೀಡುತ್ತದೆ, ಅದರಲ್ಲಿ ಈ ಹಸಿರು ಟೋಪಿ ಕೂಡ ಭಾಗವಾಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕಂಡಕ್ಟರ್‌ ಹಾರಿಕೆ ಉತ್ತರ ನೀಡುತ್ತಲೇ ಟೋಪಿಯನ್ನು ತೆಗೆಯಲು ನಿರಾಕರಿಸುತ್ತಾರೆ.

Ad Widget

ಈ ವಿಡಿಯೋ ವೈರಲ್‌ ಆಗಿದ್ದು, ಮಹಿಳೆಯ ಧೈರ್ಯವನ್ನು ಮೆಚ್ಚಲೇಬೇಕು ಎಂದು ಕೆಲವರು ಹೇಳಿದ್ದರೆ, ಇದು ಅನಗತ್ಯ ವಿಚಾರ ಎಂದು ಕೆಲವರು ಹೇಳಿದ್ದಾರೆ.

Leave a Comment

Your email address will not be published. Required fields are marked *