ಚಾಮರಾಜನಗರ: ಕಾಡಾನೆ ಪುಂಡಾಟಕ್ಕೆ ವ್ಯಕ್ತಿ ಬಲಿ

ಸಮಗ್ರ ನ್ಯೂಸ್: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಸಮೀಪದ ಆಲದಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.

Ad Widget ... ..

ಮಲೆಮಹದೇಶ್ವರ ವನ್ಯಜೀವಿ ವಲಯದ ಆಲದ ಕೆರೆ ಅರಣ್ಯ ಪ್ರದೇಶಕ್ಕೆ ಪೊರಕೆ ಕಡ್ಡಿ ಸಂಗ್ರಹಕ್ಕೆಂದು ಹೋಗಿದ್ದ ಸಮಯದಲ್ಲಿ ತಂದೆ-ಮಗನ ಮೇಲೆ ಆನೆ ದಾಳಿ ಮಾಡಿದೆ. ಆನೆ ದಾಳಿಯಿಂದ ತಂದೆ ಸಾವನ್ನಪ್ಪಿದ್ದು, ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Ad Widget

ಪೊರಕೆ ಕಡ್ಡಿ ಸಂಗ್ರಹಕ್ಕೆಂದು ಪುತ್ರ ಚಂದ್ರು ಜೊತೆ ಹೋಗಿದ್ದ ಪ್ರಭುಲಿಂಗಸ್ವಾಮಿ ಮೇಲೆ ಕಾಡಾನೆ ದಾಳಿ ಮಾಡಿದೆ. ಪ್ರಭು ಲಿಂಗಸ್ವಾಮಿಯ ಮೃತ ದೇಹವನ್ನು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *