ವಿಧವಾ, ವಿವಾಹವಾಗದ 15 ಮಹಿಳೆಯರಿಗೆ ಪಂಗನಾಮ ಹಾಕಿದ್ದ ಆರೋಪಿ ಅಂದರ್

ಸಮಗ್ರ ನ್ಯೂಸ್: ಮದುವೆಯಾಗುವ ನೆಪದಲ್ಲಿ ವಿಧವಾ ಹಾಗೂ ಅವಿವಾಹಿತ ಮಹಿಳೆಯರನ್ನು ವಂಚಿಸಿ ಹಣ ಹಾಗೂ ಚಿನ್ನಾಭರಣಗಳನ್ನು ದೋಚುತ್ತಿದ್ದ ಆರೋಪಿಯೊಬ್ಬ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

Ad Widget ... ..

ಬೆಂಗಳೂರಿನ ಬನಶಂಕರಿ 3ನೇ ಹಂತ ಹೊಸಕೆರೆಹಳ್ಳಿ ಕಾಳಿದಾಸನಗರ ನಿವಾಸಿ ಬಸವೇಗೌಡ ಎಂಬವರ ಪುತ್ರ ಕೆ.ಬಿ.ಮಹೇಶ್‌ (35) ಬಂಧಿತ ಆರೋಪಿ. ಈತ ಈವರೆಗೂ 15 ಮಹಿಳೆಯರಿಗೆ ಈ ರೀತಿ ವಂಚಿಸಿದ್ದಾನೆ.
ಮೈಸೂರಿನ ಹೇಮಲತಾ ಎಂಬುವವರನ್ನು ತಾನು ಡಾಕ್ಟರ್‌ ಎಂದು ಹೇಳಿಕೊಂಡು ಶಾದಿ ಡಾ.ಕಾಂನಲ್ಲಿ ಪರಿಚಯಿಸಿಕೊಂಡು ನಂಬಿಸಿದ್ದ. ನಂತರ ಮದುವೆಯಾಗಿ ಅವರ ಬಳಿ ಇದ್ದ 15 ಲಕ್ಷ ಹಾಗೂ 20 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ. ಈ ಸಂಬಂಧ ಹೇಮಲತಾ ನೀಡಿದ್ದ ದೂರಿನಂತೆ ಮೈಸೂರಿನ ಕುವೆಂಪುನಗರ ಠಾಣೆ ಪೊಲೀಸರು ಮಹೇಶ್ ನನ್ನು ಬಂಧಿಸಿದ್ದಾರೆ.

Ad Widget

ಈತನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್‌ಲೈಟ್‌, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್‌ ಹಾಗೂ 7 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *