ಸಮಗ್ರ ನ್ಯೂಸ್: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಪ್ಲೈ ಓವರ್ ಮೇಲೆ ಬೈಕ್ ವೀಲಿಂಗ್ ಮಾಡಿ ದುಸ್ಸಾಹಸ ತೋರಿದ್ದ ನಾಲ್ವರು ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಮೊಹಮದ್ ಹುಸೇನ್, ವಾಸೀಂ ಖಾನ್, ಮುಜಾಮೀನ್, ಸುಲ್ತಾನ್ ಎಂದು ಗುರುತಿಸಲಾಗಿದೆ. ಓನ್ ವೇ ಯಲ್ಲಿ ಹುಡುಗಿಯರೊಂದಿಗೆ ವ್ಹೀಲಿಂಗ್ ಮಾಡಿ ಹುಚ್ಚಾಟ ತೋರಿದ್ದರು ಮಾತ್ರವಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ಆಧರಿಸಿ ನಾಲ್ವರ ಮೇಲೆ ಮೋಟಾರ್ ವೆಹಿಕಲ್ ಆಕ್ಟ್ ಅಡಿ ಕೇಸ್ ದಾಖಲಾಗಿದೆ. ಹೆದ್ದಾರಿ ಸಂಚಾರ ಆರಂಭದಿಂದಲೂ ವೀಲಿಂಗ್ ಮಾಡಿ ಪುಂಡಾಟ ತೋರುತ್ತಿದ್ದರು ಎಂದು ತಿಳಿದುಬಂದಿದೆ. ಪ್ರತಿಯೊಬ್ಬರ ಮೇಲು ತಲಾ ನಾಲ್ಕು ಕೇಸ್ ಗಳನ್ನು ದಾಖಲಿಸಲಾಗಿದೆ.






