ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಪಿಂಡಪ್ರದಾನ ಮಾಡಿದ ಜಿಲ್ಲಾಡಳಿತ

ಸೋಮೇಶ್ವರ: ಕೋವಿಡ್ ನಿಂದ ಮೃತಪಟ್ಟ 12 ಜನ ಅನಾಥರ ಮೋಕ್ಷಕ್ಕೆ ದ.ಕ. ಜಿಲ್ಲಾಡಳಿತದ ವತಿಯಿಂದ ತಿಲಹೋಮ ಮತ್ತು ಪಿಂಡ ಪ್ರದಾನ ಕಾರ್ಯಕ್ರಮ ಸೋಮೇಶ್ವರದ ಸೋಮನಾಥೇಶ್ವರ ದೇವಾಲಯದಲ್ಲಿ ನಡೆಯಿತು.

Ad Widget ... ..

ಸ್ಥಳೀಯ ಅರ್ಚಕರಾದ ಶಂಕರ್ ಅಡಿಗ ಅವರ ಮಾರ್ಗದರ್ಶನದಲ್ಲಿ

Ad Widget

ಮೃತರ ಪರವಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ರವಿಶಂಕರ್ ಸೋಮೇಶ್ವರ ವಿಧಿವಿಧಾನಗಳನ್ನು ನೆರವೇರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಸೋಮೇಶ್ವರ ಸಮುದ್ರಕಿನಾರೆಯಲ್ಲಿ ಪಿಂಡಪ್ರದಾನ ಮಾಡಿದರು.

ದ ಕ ಜಿಲ್ಲಾಸ್ಪತ್ರೆಯಲ್ಲಿ 12 ಜನ ಅನಾಥರು ಕೊರೋನಾಗೆ ತುತ್ತಾಗಿ ಸಾವನ್ನಪ್ಪಿದ್ದರು. ಅವರೆಲ್ಲರ ಅಂತ್ಯಸಂಸ್ಕಾರ ನಡೆಸಿ ಆಸ್ತಿಯನ್ನು ಸಂಗ್ರಹಿಸಿಡಲಾಗಿತ್ತು. ಇದೀಗ ಅವರೆಲ್ಲರ ಆತ್ಮಕ್ಕೆ ಸದ್ಗತಿ ಸಿಗಲೆಂದು ಜಿಲ್ಲಾಡಳಿತದ ವತಿಯಿಂದ ಪಿಂಡ ಪ್ರದಾನ ಮಾಡಲಾಗಿದೆ ಎಂದು ಸಂಸದರು ಹೇಳಿದ್ದಾರೆ.

Leave a Comment

Your email address will not be published. Required fields are marked *