ಸೋಮವಾರಪೇಟೆ: ಭೀಕರ ರಸ್ತೆ ಅಪಘಾತ ಹಿರಿಕರ ದಂಪತಿ ದಾರುಣ ಸಾವು

ಸಮಗ್ರ ನ್ಯೂಸ್: ಕಾರು ಮತ್ತು ಕೆ.ಎಸ್.ರ್ .ಟಿ.ಸಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸೋಮವಾರಪೇಟೆ ಬಳಿಯ ಹಿರಿಕರ ಗ್ರಾಮದ ದಂಪತಿಗಳು ಸಾವನ್ನಪ್ಪಿರುವ ಘಟನೆ ಬಿಳಿಕೆರೆ ಬಳಿಯ ರಂಗನಕೊಪ್ಪಲು ಹೆದ್ದಾರಿಯಲ್ಲಿ ನಡೆದಿದೆ.

Ad Widget ... ..

ನಿವೃತ್ತ ಪ್ರಾಂಶುಪಾಲರಾದ ಹೆಚ್.ಬಿ.ಬೆಳ್ಳಿಯಪ್ಪ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅವರ ಪತ್ನಿ ವೀಣಾ ರವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಮಯದಲ್ಲಿ ಮಾರ್ಗಮಧ್ಯೆ ಕೊನೆಯುಸಿರು ಏಳದಿದ್ದಾರೆ.

Ad Widget

ಜುಲೈ 1ರಂದು ಮಧ್ಯಾಹ್ನ ಕಾರಿನಲ್ಲಿ ಬೆಳ್ಳಿಯಪ್ಪ ದಂಪತಿಗಳು ಮೈಸೂರಿಗೆ ತೆರಳುತ್ತಿದ್ದ ಸಮಯದಲ್ಲಿ ದುರ್ಘಟಣೆ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜು-ಗುಜ್ಜಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *