ಸೋಮವಾರಪೇಟೆ: ಭೀಕರ ಅಪಘಾತದಲ್ಲಿ ದಂಪತಿ ದುರ್ಮರಣ

ಸಮಗ್ರ ನ್ಯೂಸ್: ಭೀಕರ ರಸ್ತೆ ಅಪಘಾತದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ಬಳಿಯ ಹಿರಿಕರ ಗ್ರಾಮದ ದಂಪತಿ ಸಾವನ್ನಪ್ಪಿರುವ ಘಟನೆ ಬಿಳಿಕೆರೆ ಬಳಿಯ ರಂಗನಕೊಪ್ಪಲು ಹೆದ್ದಾರಿಯಲ್ಲಿ ಶನಿವಾರ ವರದಿಯಾಗಿದೆ.

Ad Widget ... ..

ಕೆಎಸ್ಸಾರ್ಟಿಸಿ ಬಸ್ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ ಮೈಸೂರು ಕಡೆಗೆ ಕಾರಿನಲ್ಲಿ ಸಂಚರಿಸುತ್ತಿದ್ದ ನಿವೃತ್ತ ಪ್ರಾಂಶುಪಾಲ ಹಿರಿಕರ ಗ್ರಾಮದ ನಿವಾಸಿ ಹೆಚ್.ಬಿ.ಬೆಳ್ಳಿಯಪ್ಪ (66) ಸ್ಥಳದಲ್ಲೇ ಮೃತಪಟ್ಟರು.

Ad Widget

ಬೆಳ್ಳಿಯಪ್ಪ ಅವರ ಪತ್ನಿ ವೀಣಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *