ಸುಬ್ರಹ್ಮಣ್ಯ: ಬಸ್ ಇಲ್ಲದೆ ಒದ್ದಾಡುತ್ತಿರುವ ವಿದ್ಯಾರ್ಥಿಗಳಿಗೆ ಸಿಗಬಹುದೇ ಪರಿಹಾರ?

ಸಮಗ್ರ ನ್ಯೂಸ್:ಸುಳ್ಯದಿಂದ ಸುಬ್ರಹ್ಮಣ್ಯಕ್ಕೆ ಮುಂಜಾನೆ ಕಡಿಮೆ ಬಸ್ ಸಂಚಾರ ಇರುವುದರಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾಲಯ ತಲುಪುವುದು ಕಷ್ಟವಾಗುತ್ತಿದೆ.

Ad Widget ... ..

ಗುತ್ತಿಗಾರು, ನಡುಗಲ್ಲು, ಮರಕತ, ಕಲ್ಲಾಜೆಯಲ್ಲಿ ಬಸ್ ಸಂಪೂರ್ಣ ತುಂಬಿರುತ್ತದೆ ಹಾಗಾಗಿ ಬಸ್ ನಿಲ್ಲಿಸುವುದಿಲ್ಲ. ಕೆಲವೊಮ್ಮೆ ಬಸ್ ನಲ್ಲಿ ನೇತಾಡಿಕೊಂಡು ಹೋಗಬೇಕಾದ ಪರಿಸ್ಥಿತಿಯು ಎದುರಾಗುತ್ತದೆ. ಈ ಮಳೆಗೆ ನೇತಾಡಿಕೊಂಡು ಹೋಗುವುದು ಕಷ್ಟ. ಇನ್ನು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದಾಗಿ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತಿದೆ. ಹಾಗೆ ಈ ಭಾಗಕ್ಕೆ ಬಸ್ ಕಡಿಮೆ ಇರುವುದರಿಂದ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಅತೀ ಶೀಘ್ರದಲ್ಲಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಅಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *