ಪಂಜ: ಹೃದಯಾಘಾತಕ್ಕೆ ಮೆಕ್ಯಾನಿಕ್ ಬಲಿ

ಸಮಗ್ರ ನ್ಯೂಸ್: ಹೃದಯಾಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟ ಘಟನೆ‌ ಸುಳ್ಯ ತಾಲೂಕಿನ
ಪಂಜ ಸಮೀಪದ ಕರಿಕ್ಕಳದಲ್ಲಿ ನಡೆದಿದೆ. ಕಳೆದ ಜೂ.25 ರಾತ್ರಿ ಘಟನೆ ಸಂಭವಿಸಿದ್ದು ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.

Ad Widget ... ..

ಪಂಬೆತ್ತಾಡಿ ಗ್ರಾಮದ ಕರಿಕ್ಕಳ ದಿ.ತಮ್ಮಯ್ಯ ಗೌಡರ ಪುತ್ರ,ಪಂಜದ ಶಿವಕೃಪಾ ಮೋಟಾರ್ಸ್ ನ
ಮೆಕಾನಿಕ್ ಭಾಸ್ಕರ ಗೌಡ ಮೃತಪಟ್ಟ ದುರ್ದೈವಿ. ಅವರು ಜೂ.25 ರಾತ್ರಿ10 ಗಂಟೆಗೆ ವೇಳೆಗೆ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Ad Widget

ಪಂಜದಲ್ಲಿ ಅವರು ಸುಮಾರು 20 ವರುಷಗಳಿಂದ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಅವಿವಾಹಿತರಾಗಿದ್ದು, ತಾಯಿ ಲಕ್ಷ್ಮೀ, ಸಹೋದರ ಸುರೇಶ, ಸಹೋದರಿಯರಾದ ವೀಣಾ, ರಾಜೀವಿ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *