ಹಾಸನ ಕಾರು ಲಾರಿ ಭೀಕರ ಅಪಘಾತ ಬೆಳ್ತಂಗಡಿ ಮೂಲದ ಮೂವರು ಸಾವು | ಓರ್ವ ಗಂಭೀರ

ಬೆಳ್ತಂಗಡಿ: ಹಾಸನದಲ್ಲಿ ಲಾರಿ ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರರರು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.

Ad Widget ... ..

ಮೃತಪಟ್ಟ ಇಬ್ಬರನ್ನು ತಾಲೂಕಿನ ಇಂದ್ರಬೆಟ್ಟು ಗ್ರಾಮದ ಕುತ್ರಬೆಟ್ಟುವಿನ ಜಯಪ್ರಕಾಶ್ (25) ಯೋಗೀಶ್(23) ಎಂದು ಗುರುತಿಸಲಾಗಿದೆ. ಮೃತಪಟ್ಟ ಇನ್ನೊಬ್ಬರು ಮತ್ತು ಗಾಯಗೊಂಡ ಒಬ್ಬರ ಮಾಹಿತಿ ತಿಳಿದುಬಂದಿಲ್ಲ.
ಹಾಸನ ಹೊರವಲಯದ ಕೆಂಚಟ್ಟಿ ಹಳ್ಳಿ ಸಮೀಪ ಅಪಘಾತ ಸಂಭವಿಸಿದೆ.

Ad Widget

ರಸ್ತೆಯಲ್ಲಿದ್ದ ಹಂಪ್ ಕಂಡು ಲಾರಿ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಕಾರು ನಿಯಂತ್ರಣಕ್ಕೆ ಬಾರದೇ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಪ್ರಯಾಣಿಕರ ದೇಹ ಸಂಪೂರ್ಣ ಛಿದ್ರಗೊಂಡಿತ್ತು. ಮೃತಪಟ್ಟವರು ಇಬ್ಬರು ಸಹೋದರರಾಗಿದ್ದು, ಜೊತೆಗಿದ್ದ ಆಧಾರ್ ಕಾರ್ಡಿನಿಂದ ಗುರುತು ಪತ್ತೆ ಹಚ್ಚಲಾಗಿದೆ. ಇನ್ನಿಬ್ಬರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *