ಅತ್ತೆ, ಮಾವ, ಗಂಡ ಸೇರಿಕೊಂಡು ಸೊಸೆಯನ್ನೇ ಉಸಿರುಗಟ್ಟಿಸಿ ಕೊಲೆ!

ಸಮಗ್ರ ನ್ಯೂಸ್: ಅತ್ತೆ, ಮಾವ ಹಾಗೂ ಗಂಡ ಸೇರಿಕೊಂಡು ಸೊಸೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.

Ad Widget ... ..

ಶ್ರೀದೇವಿ ದೀಪಕ್ ಬೇವಿನಕಟ್ಟಿ (31) ಕೊಲೆಯಾದ ಮಹಿಳೆ. ದೀಪಕ್ ಬೇವಿನಕಟ್ಟಿ (34), ರಾಮಚಂದ್ರ ಬೇವಿನಕಟ್ಟಿ (64) ಹಾಗೂ ಪದ್ಮಾವತಿ ಬೇವಿನಕಟ್ಟಿ (50) ಸೊಸೆಯನ್ನು ಹತ್ಯೆಗೈದ ಆರೋಪಿಗಳು.

Ad Widget

ಮದುವೆಯಾಗಿ 3 ವರ್ಷಗಳಾದರೂ ಶ್ರೀದೇವಿಗೆ ಮಕ್ಕಳಾಗಿರಲಿಲ್ಲ. ಅಲ್ಲದೇ ತವರು ಮನೆಯಿಂದ ಹಣ ತರುವಂತೆ ಶ್ರೀದೇವಿ ಗಂಡ ಪೀಡಿಸುತ್ತಿದ್ದ. ಈ ಹಿನ್ನೆಲೆ ಪತಿ, ಅತ್ತೆ ಹಾಗೂ ಮಾವ ಸೇರಿಕೊಂಡು ಸೊಸೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *