ಬಾಲಿವುಡ್ ನ ಖ್ಯಾತ ನಟ ನಾನಾ ಪಾಟೇಕರ್ ಇನ್ನಿಲ್ಲ

ಸಮಗ್ರ ನ್ಯೂಸ್: ಬಾಲಿವುಡ್‌ನ ಖ್ಯಾತ ನಟ ನಾನಾ ಪಾಟೇಕರ್ (75) ಅಸುನೀಗಿದ್ದಾರೆ. ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಇದರಿಂದಾಗಿ ಅವರು ಕೊನೆಯುಸಿರೆಳೆದಿದ್ದಾರೆ. ನಾನಾ ಪಾಟೇಕರ್ ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ವರದಿಯಾಗುತ್ತಿದೆ. ನಾನಾ ಪಾಟೇಕರ್ ಮೃತದೇಹದ ಮರಣೋತ್ತರ ಶವ ಪರೀಕ್ಷೆ ನಡೆಸಲಾಗುತ್ತಿದೆ.

. Ad Widget . Ad Widget . Ad Widget

ಗೋವಾದಲ್ಲಿದ್ದ ತಮ್ಮ ನಿವಾಸದಲ್ಲಿ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.

. Ad Widget .

ಆಸ್ಪತ್ರೆಗೆ ತಂದಾಗ ನಾನಾ ಪಾಟೇಕರ್ ಅವರ ಆರೋಗ್ಯ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು. ಮಣಿಪಾಲ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ್ ಸಾಲ್ಕರ್ ಅವರು ಮಾಹಿತಿ ನೀಡಿ, ವೈದ್ಯಕೀಯ ಸಿಬ್ಬಂದಿ ಸತತ 45 ನಿಮಿಷಗಳ ಕಾಲ ಸಿಪಿಆರ್ (CPR) ನೀಡುವ ಮೂಲಕ ಅವರನ್ನು ಬದುಕಿಸಲು ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ನಾನಾ ಪಾಟೇಕರ್ ಅವರು ಮುಂಜಾನೆ 5:20ಕ್ಕೆ ಕೊನೆಯುಸಿರೆಳೆದರು ಎಂದು ತಿಳಿಸಿದ್ದಾರೆ.

ನಟ ನಾನಾ ಪಾಟೇಕರ್ ಅವರು ಮನೆಯಲ್ಲೇ ಕುಸಿದು ಬಿದ್ದು ಆಸ್ಪತ್ರೆಗೆ ಬರುವಷ್ಟರಲ್ಲಿ ಸಾವನ್ನಪ್ಪಿದ್ದರಿಂದ, ನಿಯಮಾವಳಿಗಳ ಪ್ರಕಾರ ಅಧಿಕಾರಿಗಳು ಈ ಬಗ್ಗೆ ಕಡ್ಡಾಯ ವೈದ್ಯಕೀಯ-ಕಾನೂನು ಪ್ರಕರಣವನ್ನು (MLC – Medico-Legal Case) ದಾಖಲಿಸಿಕೊಂಡಿದ್ದಾರೆ. ಸಾವು ಸಂಭವಿಸಿದ ನಿಖರ ಕಾರಣವನ್ನು ತಿಳಿದುಕೊಳ್ಳಲು ಮರಣೋತ್ತರ ಪರೀಕ್ಷೆಯನ್ನು (Post-mortem) ನಡೆಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

Leave a Comment

Your email address will not be published. Required fields are marked *