ಸಮಗ್ರ ನ್ಯೂಸ್: ಬೆಂಗಳೂರಿನ ಯಲಹಂಕ ನ್ಯೂ ಟೌನ್ ನ್ಯಾಶನಲ್ ಪಬ್ಲಿಕ್ ನ 9ನೇ ತರಗತಿ ಓದುತ್ತಿದ್ದ ಆದಿತ್ಯಾ ಎಂಬ ಬಾತಾಯಕೆಲಮದಿನಗಳಿಂದ ನಾಪತ್ತೆಯಾಗಿದ್ದು ಇದೀಗ ಆತನ ಮನೆಯವ್ರು ಹುಡುಕುತ್ತಾ ಕರಾವಳಿಯ ಮಲ್ಪೆಗೆ ಬಂದಿದ್ದಾರೆ.
ತನ್ನ ತಾಯಿಯ ಮೊಬೈಲ್ನಲ್ಲಿ ಕೆಲವು ಪ್ರವಾಸಿ ತಾಣಗಳ ಬಗ್ಗೆ ಸರ್ಚ್ ಮಾಡಿ ಮಾಹಿತಿ ಸಂಗ್ರಹಿಸಿ ಬ್ಯಾಗ್ನಲ್ಲಿ ಬಟ್ಟೆ ತುಂಬಿಕೊಂಡು ಮನೆ ಬಿಟ್ಟಿದ್ದು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಿತ್ಯಾ ಅಮ್ಮನ ಫೋನ್ನಲ್ಲಿ ಮಂಗಳೂರು, ಮಲ್ಪೆ, ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿ ಊರು ಬಿಟ್ಟಿದ್ದಾನೆ. ಮೇ 29ರಂದು ಕಟ್ಟಿಂಗ್ ಶಾಪ್ಗೆಂದು ಮನೆಯಿಂದ ತೆರಳಿದ್ದ ಆದಿತ್ಯಾ ಬಟ್ಟೆ ಸಮೇತ ಮನೆ ಬಿಟ್ಟಿದ್ದಾನೆ. ಇದರಿಂದ ಗಾಬರಿಗೊಳಗಾದ ಪೋಷಕರು ಕರಾವಳಿ ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕ ಮನೆ ಬಿಟ್ಟು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಆರ್.ಟಿ.ನಗರ ಸೇರಿ ಮಲ್ಪೆ ಭಾಗದ ಠಾಣೆಗೆ ಪೊಲೀಸರಿಂದ ಮಾಹಿತಿ ನೀಡಲಾಗಿದೆ.






