ಮೇ.29ರಿಂದ ರಾಜ್ಯದಲ್ಲಿ ಶಾಲಾರಂಭ| ಸಿಹಿಯೊಂದಿಗೆ ಬರಮಾಡಿಕೊಳ್ಳಲು ರೆಡಿಯಾದ ಶಿಕ್ಷಕರು

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇದೇ ಮೇ 29 ರಿಂದ ಆರಂಭವಾಗುತ್ತಿದ್ದು, ಶಾಲೆಯ ಕೋಣೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಾಲೆ ಆರಂಭದ ಮೊದಲ ದಿನವೇ ಎಲ್ಲ ಶೀರ್ಷಿಕೆಗಳ ಪಠ್ಯಪುಸ್ತಕ ಮತ್ತು ಒಂದು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ.

Ad Widget ... ..

ಈಗಾಗಲೇ ಪಠ್ಯಪುಸ್ತಕಗಳು ಪೂರೈಕೆಯಾಗಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳಿಗೆ ಅವುಗಳನ್ನು ಕಳುಹಿಸಲಾಗುತ್ತಿದೆ. ಕೆಲವೆಡೆ ಶಾಲೆ ಆರಂಭದ ಮೊದಲ ದಿನ ತಳಿರು ತೋರಣ ಮತ್ತು ರಂಗೋಲಿಗಳಿಂದ ಅಲಂಕರಿಸಿ ಮಕ್ಕಳಿಗೆ ಅದ್ದೂರಿ ಸ್ವಾಗತ ನೀಡಲು ತಯಾರಿ ನಡೆದಿದೆ.

Ad Widget

ಇನ್ನು ಶಾಲೆ ಆರಂಭೋತ್ಸವದ ದಿನದಂದು ಮಕ್ಕಳು ಮತ್ತು ಅತಿಥಿಗಳಿಗೆ ಸಿಹಿ ವಿತರಣೆ ಮಾಡಲು ಸಿದ್ಧತೆ ನಡೆದಿದ್ದು, ಇದರ ಜೊತೆಗೆ ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ಬಿಸಿಯೂಟ ಆರಂಭಿಸಲಾಗುತ್ತದೆ. ಹೀಗಾಗಿ ಎಲ್ಲ ಶಾಲೆಗಳ ಅಡುಗೆ ಕೋಣೆ, ಪಾತ್ರೆಗಳು, ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಲಾಗಿದೆ.

Leave a Comment

Your email address will not be published. Required fields are marked *