ಸುಳ್ಯ: ಕೊಡಿಯಾಲಬೈಲ್‌ ನಲ್ಲಿ ಪರಿವಾರ ದೈವಗಳ ನೇಮೋತ್ಸವ

ಸಮಗ್ರ ನ್ಯೂಸ್: ಮೇ 22, ಕೊಡಿಯಾಲಬೈಲಿನ ಶ್ರೀ ಮಹಮ್ಮಾಯಿ ಮಾರಿಯಮ್ಮ ದೇವಸ್ಥಾನದಲ್ಲಿ ಪರಿವಾರ ದೈವಗಳ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ನಡೆಯಿತು.

Ad Widget ... ..

ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲಿನಲ್ಲಿ ಪರಿವಾರ ದೈವಗಳ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಮೇ 20 ರಿಂದ 22ನೇ ಸೋಮವಾರದ ತನಕ ನಡೆಯಿತು. ಈ ಸಂದರ್ಭದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ತಂಡಗಳಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರನ್ನು ಮನರಂಜಿಸಲಾಯಿತು.

Ad Widget

ಮೇ 21ರ ರಾತ್ರಿ ಶ್ರೀ ಗುಳಿಗದೈವ, ಪಾಷಾಣಮೂರ್ತಿ ದೈವದ ನೇಮೋತ್ಸವ ಮತ್ತು ಮೇ 22ರಂದು ಶ್ರೀ ಧರ್ಮದೈವದ ನೇಮೋತ್ಸವು ನಡೆಯಿತು. ಈ ವೇಳೆ ನೂರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು.
ಇನ್ನೂ ಮೇ23 ರಿಂದ 24ರವರೆಗೆ ಶ್ರೀ ಮಹಾಮ್ಮಾಯಿ ದೇವರ ಮತ್ತು ಪರಿವಾರದ ದೈವಗಳ ಮಾರಿಪೂಜೆ ಮತ್ತು ಕಾಲಾವಧಿ ಉತ್ಸವ ನಡೆಯಲಿದೆ.

Leave a Comment

Your email address will not be published. Required fields are marked *