Ad Widget .

ನಾಳೆಯಿಂದ ರಾಜ್ಯದಲ್ಲಿ ಸಿದ್ದು ಸರ್ಕಾರ| ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ 135 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ರಚನೆಗೆ ಸಿದ್ಧವಾಗಿದೆ. ಕಳೆದ ಐದು ದಿನಗಳಿಂದ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇಬ್ಬರೂ ನಾಯಕರು ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಇದೀಗ ಹೈಕಮಾಂಡ್ ನಾಯಕರು ಕಗ್ಗಂಟು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಇದೇ ಶನಿವಾರ (ಮೇ 20) ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಗ್ಗಂಟನ್ನು ಪರಿಹರಿಸುವುದರಲ್ಲಿಯೇ ಹೈರಾಣಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ಗೆ ಇದೀಗ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆಯ ಜಂಜಾಟ ಶುರುವಾಗಲಿದೆ.

Ad Widget . Ad Widget . Ad Widget .

ಸಚಿವ ಸಂಪುಟದಲ್ಲಿ ಯಾರಿರಬೇಕು ಎಂಬುದನ್ನು ನಿಶ್ಚಯಿಸಲು ಇಬ್ಬರು ನಾಯಕರು ಶುಕ್ರವಾರವೇ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈಗಾಗಲೇ ಸಚಿವರಾಗುವ ಸಂಭ್ಯಾವರ ಪಟ್ಟಿಯನ್ನು ಕಾಂಗ್ರೆಸ್ ಸಿದ್ಧಪಡಿಸಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಸಂಭಾವ್ಯರ ಪಟ್ಟಿ ಇಂತಿದೆ.

ಸಂಭಾವ್ಯ ಸಚಿವರ ಪಟ್ಟಿ:

ಜಿ.ಪರಮೇಶ್ವರ
ಕೆ.ಎಚ್.ಮುನಿಯಪ್ಪ/ರೂಪಕಲಾ ಶಶಿಧರ್
ಬಿ.ಕೆ.ಹರಿಪ್ರಸಾದ್
ಎಂ.ಬಿ.ಪಾಟೀಲ
ರಾಮಲಿಂಗಾ ರೆಡ್ಡಿ
ಆರ್.ವಿ.ದೇಶಪಾಂಡೆ
ಕೆ.ಜೆ.ಜಾರ್ಜ್
ಎಚ್.ಕೆ.ಪಾಟೀಲ
ಕೃಷ್ಣ ಬೈರೇಗೌಡ
ಯು.ಟಿ.ಖಾದರ್/ ಸಲೀಂ ಅಹಮದ್
ಜಮೀರ್ ಅಹ್ಮದ್ ಖಾನ್/ ಎನ್.ಎ. ಹ್ಯಾರೀಸ್
ಸತೀಶ ಜಾರಕಿಹೊಳಿ
ಎಚ್‌.ಸಿ.ಮಹದೇವಪ್ಪ
ಶರಣ ಪ್ರಕಾಶ ಪಾಟೀಲ
ಅಜಯ್‌ ಧರ್ಮ ಸಿಂಗ್
ದಿನೇಶ್ ಗುಂಡೂರಾವ್
ಲಕ್ಷ್ಮಣ ಸವದಿ
ಲಕ್ಷ್ಮಿ ಹೆಬ್ಬಾಳಕರ್
ಮಧು ಬಂಗಾರಪ್ಪ
ಬಸವರಾಜ ರಾಯರಡ್ಡಿ
ಪ್ರಿಯಾಂಕ್ ಖರ್ಗೆ
ಸಂತೋಷ್ ಲಾಡ್
ವಿಜಯಾನಂದ ಕಾಶಪ್ಪನವರ
ವಿನಯ್ ಕುಲಕರ್ಣಿ
ಟಿ.ಡಿ.ರಾಜೇಗೌಡ/ ಕೆ.ಎಂ.ಶಿವಲಿಂಗೇಗೌಡ
ಬಿ.ಕೆ. ಸಂಗಮೇಶ್ವರ
ಆರ್.ಬಿ. ತಿಮ್ಮಾಪುರ
ಕೊತ್ತೂರು ಮಂಜುನಾಥ್
ಶ್ಯಾಮನೂರು ಶಿವಶಂಕರಪ್ಪ/ ಎಸ್.ಎಸ್.ಮಲ್ಲಿಕಾರ್ಜುನ
ಎಂ.ಕೃಷ್ಣಪ್ಪ/ ಪ್ರಿಯಕೃಷ್ಣ

Leave a Comment

Your email address will not be published. Required fields are marked *