Ad Widget .

ಲೇಡಿ ಸಿಂಗಂ ಎಂದು ಖ್ಯಾತಿ ಪಡೆದ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ಮೃತ್ಯು

ಸಮಗ್ರ ನ್ಯೂಸ್: ಲೇಡಿ ಸಿಂಗಂ ಎಂದೇ ಖ್ಯಾತಿ ಪಡೆದ ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ(30) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೃತ ವ್ಯಕ್ತಿ ‘ದಬಾಂಗ್ ಕ್ಯಾಪ್’ ಎಂದೂ ಪ್ರಖ್ಯಾತಿ ಪಡೆದಿದ್ದರು. ಇವರು ನಾಗಾವ್ ಜಿಲ್ಲೆಯಲ್ಲಿ ಹಾದು ಹೋದ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರಿಗೆ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ರಾಬಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ವೇಳೆ ಜುನ್ಮೋನಿ ರಾಭಾ ತನ್ನ ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಅವರು ಪೊಲೀಸ್ ಸಮವಸ್ತ್ರದಲ್ಲಿ ಇರಲಿಲ್ಲ ಎಂಬುದು ತಿಳಿದು ಬಂದಿದೆ.

Ad Widget . Ad Widget . Ad Widget .

ಜುನ್ಮೋನಿ ರಾಭಾ ಅವರು ವಿವಾದಗಳ ಕಾರಣದಿಂದ ಸುದ್ದಿಯಾಗಿ ಹಲವು ಬಾರಿ ವೃತ್ತಿಯಿಂದ ಅಮಾನತುಗೊಂಡಿದ್ದರು.

ಹಲವು ಕಷ್ಟಕರ ಪ್ರಕರಣವನ್ನು ಧೈರ್ಯವಾಗಿ ಎದುರಿಸಿದ್ದ ಅವರು ಉದ್ಯೋಗದ ಹೆಸರಿನಲ್ಲಿ ವಂಚಿಸಿದ್ದ ಭಾವಿ ಪತಿಯನ್ನು ಬಂಧಿಸಿ ಬಾರೀ ಪ್ರಶಂಸೆ ಪಡೆದಿದ್ದರು. ಅಪಘಾತದಲ್ಲಿ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ಕಂಟೈನರ್ ಟ್ರಕ್ ವಶಪಡಿಕೊಂಡಿರುವ ಬಗ್ಗೆ ದಾಖಲಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ತನಿಖೆಯನ್ನು ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *