ಕಾಸರಗೋಡು: ಪ್ರೇಯಸಿಯನ್ನು ಹತ್ಯೆಗೈದು ಪೊಲೀಸರಿಗೆ ಶರಣಾದ ಪ್ರಿಯಕರ

ಸಮಗ್ರ ನ್ಯೂಸ್: ಪ್ರೇಯಸಿಯನ್ನು ಹತ್ಯೆಗೈದು ಪ್ರಿಯಕರ ಪೊಲೀಸರಿಗೆ ಶರಣಾದ ದಾರುಣ ಘಟನೆ ಮಂಗಳವಾರ ಸಂಜೆ ಕಾಞ೦ಗಾಡ್’ನಲ್ಲಿ ನಡೆದಿದೆ.

Ad Widget ... ..

ಬ್ಯೂಟಿಶಿಯನ್ ಆಗಿ ಕೆಲಸ ಮಾಡುತ್ತಿದ್ದ
ಉದುಮ ಮಾಂಗಾಡ್ ನ ದೇವಿಕಾ(34) ಹತ್ಯೆಗೀಡಾದವರು. ಬೋವಿಕ್ಕಾನ ದ ಸತೀಶ್ ಭಾಸ್ಕರ್(36)ಕೊಲೆಗೈದ ಆರೋಪಿ. ಈತ ಕಾಞ೦ಗಾಡ್ ನ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಪರಸ್ಪರ ಉಂಟಾದ ವೈಮನಸ್ಸು ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಕೊಲೆ ಬಳಿಕ ಆರೋಪಿ ಕೊನೆಗೆ ಹೊರಗಿನಿಂದ ಬೀಗ ಜಡಿದು ಪೊಲೀಸ್ ಠಾಣೆ ಗೆ ಶರಣಾಗಿದ್ದಾನೆ.

Ad Widget

ಇಬ್ಬರ ನಡುವೆ ಕೌಟುಂಬಿಕ ಸಮಸ್ಯೆ ಉಂಟಾಗಿದ್ದು, ದೇವಿಕಾ ವಿರುದ್ಧ ಸತೀಶ್ ಭಾಸ್ಕರ್ ನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಮೇಲ್ಪರಂಬ ಠಾಣಾ ಪೊಲೀಸರು ಎರಡು ಕುಟುಂಬದವರನ್ನು ಕರೆದು ಮಾತುಕತೆ ನಡೆಸಿದ್ದರು. ಸತೀಶ್ ಕಳೆದ ಒಂದು ವಾರದಿಂದ ವಸತಿಗ್ರಹದಲ್ಲಿ ವಾಸವಾಗಿದ್ದರು. ಈ ನಡುವೆ ಮಧ್ಯಾಹ್ನ ದೇವಿಕಾಳನ್ನು ವಸತಿಗೃಹಕ್ಕೆ ಕರೆಸಿದ್ದು, ಬಳಿಕ ಈತ ಕೃತ್ಯ ನಡೆಸಿದ್ದಾನೆ.

Leave a Comment

Your email address will not be published. Required fields are marked *