ಸುಳ್ಯ: ಅಡ್ತಲೆ – ಮರ್ಕಂಜ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ!!

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ರಸ್ತೆಯು ನೂತನವಾಗಿ ಡಾಮರೀಕರಣಗೊಂಡಿದೆ. ಈ ರಸ್ತೆ ಬದಿ ಅರ್ಧ ಅಡಿ ಸಹ ಜಾಗ ಇಲ್ಲ, ಮತ್ತು ವಿದ್ಯುತ್ ಕಂಬಗಳು ರಸ್ತೆಯಲ್ಲಿಯೇ ಇದ್ದು ಪ್ರಯಾಣಿಕರಿಗೆ ಅಪಾಯ ಮಾಡುವಂತಿದೆ.

Ad Widget ... ..

ರಸ್ತೆ ಬದಿಯೇ ಚರಂಡಿ ಮತ್ತು ವಿದ್ಯುತ್ ಕಂಬಗಳು ಇರುವುದರಿಂದ, ಮುಂದೆ ಅಪಾಯಕಾರಿ ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಲೋಕೋಪಯೋಗಿ ಇಲಾಖೆ ಹಾಗೂ ಮೆಸ್ಕಾಂನಿಂದ ಈ ಬಗ್ಗೆ ಮಳೆಗಾಲ ಆರಂಭಕ್ಕೆ ಮೊದಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.

Ad Widget

ಈ ರಸ್ತೆಯ ದುಸ್ಥಿತಿಯಿಂದ ಟಿಪ್ಪರ್ ಚರಂಡಿಗೆ ಹೋಗಿದ್ದು ಅದನ್ನು ಜೆಸಿಬಿ ಮೂಲಕ ಮೇಲೆತ್ತಲಾಗಿತ್ತು. ಅದೇ ದಿನ ಸ್ವಲ್ಪ ಕೆಳಗೆ ಕಾರ್ ಚರಂಡಿಗೆ ಬಿದ್ದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ರಸ್ತೆ ಅಭಿವೃದ್ಧಿಗೊಂಡರೂ ಸಮಸ್ಯೆ ತಪ್ಪಿಲ್ಲ ಎಂಬುದು ಗ್ರಾಮಸ್ಥರ ಅಳಲು.

Leave a Comment

Your email address will not be published. Required fields are marked *