ನಾಲ್ಕು ಬಾರಿ ಸಿಎಂ, ಎರಡು ಬಾರಿ ಪಿಎಂ ಆಗಿರುವ ಮೋದಿ ಅಧಿಕಾರ ಬಿಟ್ಟು ಕೊಡ್ತಾರಾ? – ಶೆಟ್ಟರ್

ಸಮಗ್ರ ನ್ಯೂಸ್: ನಿವೃತ್ತರಾಗಿ ಎಂದು ಹೇಳುತ್ತಾರಲ್ಲಾ… 4 ಬಾರಿ ಸಿಎಂ, 2 ಬಾರಿ ಪ್ರಧಾನಮಂತ್ರಿಯಾಗಿರುವ ಮೋದಿಯವರು ಅಧಿಕಾರ ಬಿಟ್ಟುಕೊಡುತ್ತಾರೆಯೇ ಎಂದು ಬಿಜೆಪಿ ಮಾಜಿ ನಾಯಕ ಜಗದೀಶ್ ಶೆಟ್ಟರ್ ಅವರು ಗುರುವಾರ ಹುಬ್ಬಳ್ಳಿಯಲ್ಲಿ ಪ್ರಶ್ನಿಸಿದ್ದಾರೆ.

Ad Widget ... ..

ಮೋದಿಯವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ, ಎರಡು ಬಾರಿ ಪ್ರಧಾನಮಂತ್ರಿಗಳಾಗಿದ್ದಾರೆ. ಈ ಹಂತದಲ್ಲಿ ಅವರು ಅಧಿಕಾರ ಬಿಟ್ಟುಕೊಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಹ್ಲಾದ್ ಜೋಶಿ ಅವರು ನಾನೇ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಎಂದು ಹೇಳುತ್ತಿದ್ದಾರೆ. ಈ ಹೇಳಿಕೆ ಏಣಿ ಹತ್ತಿಸಿ ನಿಚ್ಚಣಿಕೆ ತೆಗೆದು ಹಾಕಿದ್ರು ಅಂತಾರಲ್ಲಾ ಹಾಗೆ ಆಗಿದೆ ನನ್ನ ಪರಿಸ್ಥಿತಿ.

Ad Widget

ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ಸೀನಿಯಾರಿಟಿ ಮೇಲೆ. ನನ್ನನ್ನು ಪ್ರಲ್ಹಾದ್ ಜೋಶಿ ಮಂತ್ರಿ ಮಾಡಿದ್ದು ಎಂದು ನಾನು ಹೇಳಿಲ್ಲ. ಅವರೂ ಹೇಳಿಲ್ಲ. ಈಗ ಚುನಾವಣೆಗಾಗಿ ಹೇಳ್ತಿದ್ದಾರೆ. ಬಿಜೆಪಿ ನನಗೆ ಟಿಕೆಟ್ ಕೊಡದೆ ಮೋಸ ಮಾಡಿದ್ದರಿಂದ ದೊಡ್ಡ ಪರಿಣಾಮ ಆಗುವುದು ಖಚಿತ. ನನಗೆ ಟಿಕೆಟ್ ಕೊಟ್ಟಿದ್ದರೆ ಎಲ್ಲವೂ ಸರಿ ಇರುತ್ತಿತ್ತು. ನನಗೆ ಟಿಕೆಟ್ ನೀಡದಿದ್ದರಿಂದ 15-20 ಕ್ಷೇತ್ರಗಳಲ್ಲಿ ಬಿಜೆಪಿ ಪರಿಣಾಮ ಎದುರಿಸಬೇಕಾಗಿದೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *