ಸಮಗ್ರ ನ್ಯೂಸ್: ಕಡಬ ತಾಲೂಕಿನ ಬಳ್ಪ ಸಮೀಪದ ಕೇನ್ಯ ಕಣ್ಕಲ್ ಎಂಬಲ್ಲಿ ಹೊಳೆಯಲ್ಲಿ ಸಹೋದರಿಯರಿಬ್ವರು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಮೃತರ ಪೋಸ್ಟ್ ಮಾರ್ಟಂ ನಡೆಸಲು ನಿರಾಕರಿಸಿದ ವೇಳೆ ಅರುಣ್ ಕುಮಾರ್ ಪುತ್ತಿಲರು ಪೋಸ್ಟ್ ಮಾರ್ಟಮ್ ಗೆ ವ್ಯವಸ್ಥೆ ಮಾಡಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಈ ಬಗ್ಗೆ ಶ್ರೀನಿಧಿ ಅಮ್ಮಣ್ಣಾಯ ಸೌತಡ್ಕ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, `ಪಂಜ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರದ ಭಾಗ ಅಲ್ಲಿ ನಿನ್ನೆ ನನ್ನ ಅಣ್ಣನ ಮಕ್ಕಳಿಬ್ಬರು ನದಿ ನೀರಿನಲ್ಲಿ ಮುಳುಗಿ ಮರಣಿಸಿದ ನಂತರ ರಾತ್ರಿ ಪೋಸ್ಟ್ ಮಾರ್ಟಮ್ ಮಾಡೋದಿಲ್ಲವೆಂದು ಹೇಳಿದ್ದಾರೆ. ತಹಶೀಲ್ದಾರರ ಸಹಿ ಕೂಡ ಬೇಕು ಅಂದಾಗ ಅಲ್ಲೇ ಪಕ್ಕದ ಗೌಡರ ಹುಡುಗರು ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರೆ ಮಾಡಿದಾರೆ. ಅರುಣಣ್ಣ ಈ ಚುನಾವಣೆಯ ಸಮಯದಲ್ಲೂ, ರಾತ್ರಿ ಹನ್ನೆರಡರ ನಂತರ ಬಂದು ಅದಕ್ಕೆಲ್ಲಾ ವ್ಯವಸ್ಥೆ ಮಾಡಿ ಎರಡು ಗಂಟೆಯವರೆಗೂ ಇದ್ದು ವ್ಯವಸ್ಥೆ ಮಾಡಿರುತ್ತಾರೆ.’ ಎಂದು ಟ್ವೀಟ್ ಮಾಡಿದ್ದಾರೆ.