ಸಮಗ್ರ ನ್ಯೂಸ್: ಸುಮಾರು 43 ವರ್ಷಗಳ ಹಿಂದೆ ಬಾಲಕಿಯೊಬ್ಬಳು ತನ್ನ ಕುಟುಂಬದವರನ್ನು ಆಕಸ್ಮಿಕವಾಗಿ ಕಳೆದುಕೊಂಡಿದ್ದು , ಈಗ ಆಕೆ ತನ್ನ ಕುಟುಂಬದವರನ್ನು ಹುಡುಕಾಡುತ್ತಿದ್ದಾರೆ.
ಇವರು ಮಂಗಳೂರು ಬಸವನ ಗುಡಿ ರಸ್ತೆಯ ಕಾರ್ ಸ್ಟ್ರೀಟ್ ನಿವಾಸಿ ಛಾಯಾ ಗಾಣಿಗ (48) ಇವರು ಸದಾನಂದ ಗಾಣಿಗ ಮತ್ತು ಗಿರಿಜಾ ಗಾಣಿಗ ದಂಪತಿಯ ಪುತ್ರಿಯಾಗಿದ್ದು, 43 ವರ್ಷಗಳ ನಂತರ ಕುಟುಂಬವನ್ನು ಅರಸುತ್ತಿದ್ದಾರೆ.

ಇವರು ಐದು ವರ್ಷಗಳ ಹಿಂದೆ ತನ್ನ ಕುಟುಂಬವನ್ನು ಕಳೆದುಕೊಂಡಿದ್ದು ಅದಾದ ಬಳಿಕ ಛಾಯಾ ಅವರನ್ನು ಕುಟುಂಬವೊAದು ದತ್ತು ಪಡೆದು ಜರ್ಮನಿಯಲ್ಲಿ ವಾಸಗಿದ್ದರು. ಇದೀಗ 43 ವರ್ಷಗಳ ಪುನಃ ಮಂಗಳೂರಿಗೆ ಮರಳಿದ ಛಾಯಾ ತನ್ನ ಕುಟುಂಬದವರನ್ನು ಮತ್ತು ಸಂಬಂಧಿಕರನ್ನು ಹುಡುಕುತ್ತಿದ್ದಾರೆ.
ಛಾಯಾ ಗಾಣಿಗ ಅವರ ಕುಟುಂಬದವರು ಯಾರೇ ಬಂದರೂ 8618928287 ಗೆ ಸಂಪರ್ಕಿಸಲು ಕೋರಲಾಗಿದ್ದು, ಮಾಹಿತಿ ನೀಡಿದವರಿಗೆ 10,000 ರೂ. ನಗದು ಬಹುಮಾನ ನೀಡಲಾಗುವುದು.






