ದಶಪಥ‌ ಹೆದ್ದಾರಿಯ ರಾಮನಗರ ಸಮೀಪ ಭೀಕರ ಅಪಘಾತ| ಇಬ್ಬರು ಸ್ಥಳದಲ್ಲೇ ಸಾವು; ಮತ್ತೋರ್ವ ಗಂಭೀರ

ಸಮಗ್ರ ನ್ಯೂಸ್: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.

Ad Widget ... ..

ಒಂದೇ ಬೈಕ್‌ನಲ್ಲಿದ್ದ ಮೂವರಿಗೆ ಹಿಂಬದಿಯಿಂದ ಬಂದ ಮತ್ತೊಂದು ‌ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದ ಯುವಕರ ಮೇಲೆ ಮತ್ತೊಂದು ಕಾರು ಹರಿದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

Ad Widget

ಸ್ಥಳಕ್ಕೆ ರಾಮನಗರ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಅವಘಡದಲ್ಲಿ ಕಾಲು ಮುರಿದಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಮೃತರು ಯಾವ ಊರಿನವರು, ಹೆಸರು ಎಲ್ಲವೂ ತಿಳಿದು ಬರಬೇಕಿದೆ.

Leave a Comment

Your email address will not be published. Required fields are marked *