‘ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ; ಮೋದಿ – ದೇವೇಗೌಡ್ರ ನಡುವೆ ಮಾತುಕತೆ ಆಗಿದೆ’ | ವೈರಲ್ ಆಗ್ತಿದೆ ಪ್ರೀತಂಗೌಡ ಹೇಳಿಕೆ

ಸಮಗ್ರ ನ್ಯೂಸ್: ‘ಜೆಡಿಎಸ್‌ಗೆ ಮತ ಹಾಕಿದರೆ, ಬಿಜೆಪಿಗೇ ಹಾಕಿದಂತೆ. ದೇವೇಗೌಡರು, ಮೋದಿ ಸಾಹೇಬರು ಮಾತನಾಡಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಬರೋದು 20- 25 ಮಾತ್ರ’ ಎಂದು ಶಾಸಕ ಪ್ರೀತಂ ಗೌಡ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Ad Widget ... ..

ಹಾಸನ ನಗರ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಪ್ರಚಾರದ ಸಂದರ್ಭದಲ್ಲಿ ಪ್ರೀತಂ ಮಾತನಾಡಿದ್ದು, ‘ಮೈಸೂರಿನ ಮೇಲೆ ಬೆಂಗಳೂರಿಗೆ ಹೋಗೋದು ಬೇಡ. ಹಾಸನದಿಂದ ಬೆಳ್ಳೂರು ಕ್ರಾಸ್‌ ಮೇಲೆ ಹೋಗಿ ಎಂದು ಹೇಳುತ್ತೇನೆ. ಅದರ ಮೇಲೆ ನಿಮ್ಮಿಷ್ಟ’ ಎಂದಿದ್ದಾರೆ.

Ad Widget

‘ಮೈಸೂರಿನ ಮೇಲೆಯೇ ಬೆಂಗಳೂರಿಗೆ ಹೋಗೋದಕ್ಕೆ ಖುಷಿಯಾಗುತ್ತದೆ ಅನ್ನೋದಾದರೆ, ಏನೂ ಮಾಡಲು ಆಗದು. ಎಲ್ಲ ನದಿ ನೀರು ಸಮುದ್ರಕ್ಕೆ ಹರಿಯುವಂತೆ, ಎಲ್ಲರೂ ನಮ್ಮ ಹತ್ತಿರಕ್ಕೇ ಬರಬೇಕು. ಅವರಿಗೆ ವೋಟು ಹಾಕಿದರೂ, ಬರೋದು ನಮ್ಮ ಹತ್ತಿರವೇ’ ಎಂದಿದ್ದಾರೆ.

Leave a Comment

Your email address will not be published. Required fields are marked *