ರೈಲಿನಿಂದ ಎಸೆಯಲ್ಪಟ್ಟು ಯುವಕ ದುರ್ಮರಣ

ಸಮಗ್ರ ನ್ಯೂಸ್: ಸ್ನೇಹಿತನ ಜೊತೆ ಗೋವಾಕ್ಕೆ ತೆರಳುತ್ತಿದ್ದ ಯುವಕನೊಬ್ಬ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಪೆರಿಂಗಡಿಯಲ್ಲಿ ನಡೆದಿದೆ. ಪಾಲಕ್ಕಾಡ್ ನ ನಿವಾಸಿ ಸಾಬೀರ್(32) ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

Ad Widget ... ..

ಗೋವಾಕ್ಕೆ ತಲಪಿದಾಗ ಸ್ನೇಹಿತನು ಸಾಬೀರ್ ನಾಪತ್ತೆಯಾಗಿದ್ದು , ಈ ಬಗ್ಗೆ ಸ್ನೇಹಿತನು ಗೋವಾ ಪೊಲೀಸರಿಗೆ ದೂರು ನೀಡಿದ್ದು, ಗೋವಾ ಪೊಲೀಸರು ಕೇರಳ ಮತ್ತು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಕುಂಬಳೆ ಪೊಲೀಸ್ ಠಾಣೆಯ ಪೆರಿಂಗಡಿಯ ರೈಲ್ವೆ ಹಳಿ ಬಳಿ ಮೃತದೇಹ ಪತ್ತೆಯಾಗಿದೆ.

Ad Widget

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದ್ದು,
ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *