ಸಮಗ್ರ ನ್ಯೂಸ್: ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಗೆಬೈಲ್ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸಿದ ಪ್ರಕರಣದಲ್ಲಿ ಬಿಟಿವಿ ಎಂಡಿ ಜಿ.ಎಂ.ಕುಮಾರ್, ವರದಿಗಾರ ಭರತ್ ರಾಜ್, ನಿರೂಪಕ ಶೇಷ ಕೃಷ್ಣಗೆ ಉಡುಪಿ ಜಿಲ್ಲಾ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಶನಿವಾರ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 10,000 ದಂಡ ವಿಧಿಸಿದೆ.
‘2017ರಲ್ಲಿ ಬಿಟಿವಿಯಲ್ಲಿ ಪ್ರಕಟವಾದ ಮಾನಹಾನಿಯಾಗುವಂತಹ ಸುಳ್ಳು ಸುದ್ದಿಯ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದೆ. 6 ವರ್ಷಗಳ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದ್ದು ಆರೋಪಿಗಳಿಗೆ ತಲಾ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಕಿಶನ್ ಹೆಗ್ಡೆ ಕೊಳ್ಗೆಬೈಲ್ ಪತ್ರಿಕೆಗೆ ತಿಳಿಸಿದರು.
ಮೂವರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು ಮೇಲ್ಮನವಿ ಸಲ್ಲಿಕೆಗೆ 1 ತಿಂಗಳ ಗಡುವು ನೀಡಲಾಗಿದೆ.