ಸುಳ್ಯ: ಹೆಬ್ಬಾವನ್ನೇ ನುಂಗಿದ ಕಾಳಿಂಗ

ಸಮಗ್ರ ನ್ಯೂಸ್: ಹೆಬ್ಬಾವಿನೊಂದಿಗೆ ಕದನಕ್ಕೆ ಇಳಿದ ಕಾಳಿಂಗ ಸರ್ಪವೊಂದು ಹೆಬ್ಬಾವನ್ನೆ ನುಂಗಿದ ಘಟನೆ ದ.ಕ‌ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಪಾಲಡ್ಕದಲ್ಲಿ ನಡೆದಿದೆ.

. Ad Widget . Ad Widget . Ad Widget .

ಮೆರಿನ್ ಇಂಜಿನಿಯರ್ ಆಗಿರುವ ಗಿರೀಶ್ ಪಾಲಡ್ಕರವರು ಎ.3ರಂದು ಸಂಜೆ ತೋಟಕ್ಕೆ ಹೋದ ಸಂದರ್ಭದಲ್ಲಿ ಕಾಳಿಂಗ ಹಾವು ಹೆಬ್ಬಾವನ್ನು ನುಂಗುವ ದೃಶ್ಯ ಕಂಡುಬಂದಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಸುಮಾರು ಅರ್ಧ ಗಂಟೆಗಳ ಕಾಲ ಕಾಳಿಂಗ ಹಾಗೂ ಹೆಬ್ಬಾವಿನ ನಡುವೆ ಕದನ ನಡೆದಿದ್ದು, ಎರಡೂ ಸರ್ಪಗಳು ಪರಸ್ಪರ ಫೈಟ್ ಮಾಡಿವೆ. ಹೆಬ್ಬಾವು ಪ್ರಾಣ ರಕ್ಷಣೆ ಮಾಡಿಕೊಳ್ಳಲು ಹೋರಾಡಿದರೆ ಹೆಬ್ಬಾವನ್ನೆ ಕಾಳಿಂಗ ಸರ್ಪ ಅರ್ಧ ನುಂಗಿದೆ. ಈ ದೃಶ್ಯವನ್ನು ಗಿರೀಶ್ ಪಾಲಡ್ಕರವರು ತನ್ನ ಮೊಬೈಲ್ ಕ್ಯಾಮೆರದಲ್ಲಿ ಸೆರೆಹಿಡಿದ್ದಾರೆ.

Leave a Comment

Your email address will not be published. Required fields are marked *