ಸಮಗ್ರ ನ್ಯೂಸ್: ಸಿಕ್ಕಿಂನ ನಾಥು ಲಾ ಪರ್ವತ ಪಾಸ್’ನಲ್ಲಿ ಇಂದು ಭಾರಿ ಹಿಮಪಾತ ಸಂಭವಿಸಿದ್ದು, ಹಲವಾರು ಪ್ರವಾಸಿಗರು ಹಿಮದ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನು ಈ ಪೈಕಿ 6 ಪ್ರವಾಸಿಗರು ಮೃತ ಪಟ್ಟಿರುವ ಮಾಹಿತಿ ಲಭ್ಯವಾಗಿದೆ.ಇನ್ನು ಈ ಘಟನೆಯಲ್ಲಿ 6 ಪ್ರವಾಸಿಗರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ಮೃತರಲ್ಲಿ 4 ಪುರುಷರು, 1 ಮಹಿಳೆ ಮತ್ತು ಮಗು ಸೇರಿದ್ದಾರೆ. ಹಿಮಕುಸಿತದ ನಂತರ, ಗಾಯಾಳುಗಳನ್ನು ಹತ್ತಿರದ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ 6 ಜನರು ಸಾವನ್ನಪ್ಪಿದರು. ಮಾಹಿತಿ ಪ್ರಕಾರ, ಮಧ್ಯಾಹ್ನ 12.20ಕ್ಕೆ ಈ ಅವಘಡ ಸಂಭವಿಸಿದೆ.
ಹಿಮಪಾತ ಸಂಭವಿಸಿದಾಗ 150ಕ್ಕೂ ಹೆಚ್ಚು ವಿಹಾರಿಗರು ಈ ಪ್ರದೇಶದಲ್ಲಿದ್ದರು ಎಂದು ವರದಿಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ತಂಡ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯ ಶುರು ಮಾಡಿದೆ. ಇನ್ನು ಇವರ ಜೊತೆಗೆ ಸಿಕ್ಕಿಂ ಪೊಲೀಸರು, ಸಿಕ್ಕಿಂನ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮತ್ತು ವಾಹನ ಚಾಲಕರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.







