Ad Widget .

ಸುಳ್ಯ: ಹೊತ್ತಿ ಉರಿಯುತ್ತಿರುವ ಚಾರ್ಮತ ಕಾಡು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ನಡುಗಲ್ಲು ಬಳಿಯ ಚಾರ್ಮತ ಪ್ರದೇಶದ ವಲ್ಪಾರೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಪರೀತ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಕಾಡು ಹೊತ್ತಿ ಉರಿಯುತ್ತಿದೆ. ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ.

Ad Widget . Ad Widget .

ಬಿಸಿಲಿನ ಬೇಗೆಗೆ ಒಣಗಿದ್ದ ಕಾಡಿನಲ್ಲಿ ಬೆಂಕಿ ನಿಯಂತ್ರಣ ಸಾಧ್ಯವಾಗದೆ ಪಕ್ಕದ. ಊರಾದ ಮಡಪ್ಪಾಡಿ ಬಳಿಯ ಕಾಡಿನಲ್ಲೂ ಇದೇ ಮಾದರಿಯಲ್ಲಿ ಬೆಂಕಿ ಹತ್ತಿಕೊಂಡು ಕಳೆದ ಕೆಲವು ದಿನಗಳಿಂದ ಉರಿಯುತ್ತಿದೆ.

Ad Widget . Ad Widget .

ಇದೀಗ ನಡುಗಲ್ಲು ಬಳಿಯ ಚಾರ್ಮತ ಬಳಿಯಲ್ಲೂ ಅದೇ ಮಾದರಿಯಲ್ಲಿ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಸುಪಾಸಿನ ಪ್ರದೇಶದಲ್ಲಿ ಹೊಗೆಯಿಂದ ಆವರಿಸಿಕೊಂಡಿದೆ.

Leave a Comment

Your email address will not be published. Required fields are marked *