ಸುಳ್ಯ: ಅಪಘಾತದಲ್ಲಿ ಬಾಲಕಿ ಸಾವು ಪ್ರಕರಣ| ಬಸ್ ಚಾಲಕನಿಗೆ ಜೈಲು

ಸಮಗ್ರ ನ್ಯೂಸ್: ಅರಂತೋಡು ಗ್ರಾಮದ ಬಿಳಿಯಾರು ಎಂಬಲ್ಲಿ ಫೆ.12, 2018ರಂದು ಕೆವಿಜಿಯ ಐಪಿಎಸ್ ಶಾಲೆಯ ಒಂದನೆಯ ತರಗತಿ ವಿದ್ಯಾರ್ಥಿನಿ ಆಗ್ನೇಯ ಬಾಲು ಬಸ್ಸಿನ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಶಾಲಾ ಬಸ್ ಚಾಲಕ ಧನಂಜಯ ಎಂಬುವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Ad Widget ... ..

ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ತನಿಖಾಧಿಕಾರಿ ಸರ್ಕಲ್ ಇನ್ ಸ್ಪೆಕ್ಟರ್ ಸತೀಶ್ ಕುಮಾರ್ ಆರ್ ಪ್ರಕರಣ ದಾಖಲಿಸಿಕೊಂಡು ಬಸ್ಸು ಚಾಲಕ ಧನಂಜಯರ ಮೇಲೆ ಕಲಂ 279, 304(ಎ ) ಮತ್ತು ಬಸ್ ನ ಉಸ್ತುವಾರಿ ದಿನೇಶ್ ಮೇಲೆ ಕಲಂ 304(ಎ ) ಪ್ರಕಾರ ಶಿಕ್ಷಾರ್ಹ ಅಪರಾಧ ಎಸೆಗಿರುತ್ತಾರೆ ಎಂದು ದೋಷಾರೋಪಣ ಪತ್ರವನ್ನು ಕೋರ್ಟಿಗೆ ಸಲ್ಲಿಸಿದ್ದರು.

Ad Widget

ತನಿಖೆ ನಡೆಸಿರುವ ನ್ಯಾಯಾಲಯ ಮಾರ್ಚ್ 23ರಂದು ತೀರ್ಪು ನೀಡಿದ್ದು, ಒಂದನೇ ಆರೋಪಿ ಬಸ್ಸು ಚಾಲಕ ಧನಂಜಯರಿಗೆ ಒಂದು ವರ್ಷ ಜೈಲು ಶಿಕ್ಷೆ 5,000 ರೂ ದಂಡ , ದಂಡ ಕಟ್ಟಲು ತಪ್ಪಿದರೆ ಒಂದು ತಿಂಗಳು ಸಜೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿ ದಿನೇಶ್ ರನ್ನು ದೋಷಮುಕ್ತ ಆದೇಶ ನೀಡಿದೆ.

Leave a Comment

Your email address will not be published. Required fields are marked *