Ad Widget .

sports news| ಇಂಡೋ – ಆಸೀಸ್ ಏಕದಿನ ಸರಣಿ| ಸೋತು ನಂ.1 ಪಟ್ಟ‌ ಕಳೆದುಕೊಂಡ ಭಾರತ

ಸಮಗ್ರ ನ್ಯೂಸ್: ಪ್ರವಾಸಿ ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ 1-2 ಅಂತರದ ಸೋಲುಂಡ ರೋಹಿತ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ, ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಪಟ್ಟವನ್ನು ಕಳೆದುಕೊಂಡಿದೆ.

Ad Widget . Ad Widget .

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸರಣಿಯ ನಿರ್ಣಾಯಕ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 21 ರನ್‌ಗಳ ಜಯ ದಾಖಲಿಸಿದ ಆಸ್ಟ್ರೇಲಿಯಾ ತಂಡ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ.

Ad Widget . Ad Widget .

ಅಂದಹಾಗೆ ಐಸಿಸಿ ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಎರಡೂ ತಂಡಗಳು 113 ರೇಟಿಂಗ್ಸ್‌ ಹೊಂದಿವೆ. ಆದರೂ ಭಾರತ ತಂಡ 2ನೇ ಸ್ಥಾನಕ್ಕೆ ಜಾರಿದೆ. ಇನ್ನು 2019ರ ಬಳಿಕ ತಾಯ್ನಾಡಿನಲ್ಲಿ ಟೀಮ್ ಇಂಡಿಯಾ ಸೋತ ಮೊದಲ ಒಡಿಐ ಸರಣಿ ಇದಾಗಿದೆ. 2019ರಲ್ಲೂ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸದಲ್ಲಿ 5 ಪಂದ್ಯಗಳ ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡಿತು.

ಚೆನ್ನೈ ಪಿಚ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ಭಾರತ ತಂಡದ ಶಿಸ್ತಿನ ಬೌಲಿಂಗ್‌ ದಾಳಿಯೆದುರು 49 ಓವರ್‌ಗಳಲ್ಲಿ ಆಲ್‌ಔಟ್‌ ಆಯಿತು. ಆದರೂ 269 ರನ್‌ಗಳ ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಆಸೀಸ್‌ ಬ್ಯಾಟರ್‌ಗಳು ಉತ್ತಮ ಆರಂಭ ಪಡೆದರೂ ಕೂಡ ಯಾರೊಬ್ಬರೂ ಕೂಡ ಅರ್ಧಶತದ ಗಡಿ ದಾಟಿ ದೊಡ್ಡ ಇನಿಂಗ್ಸ್‌ ಆಡಲಿಲ್ಲ. ಭಾರತದ ಪರ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಮತ್ತು ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ತಲಾ ಮೂರು ವಿಕೆಟ್‌ ಪಡೆದು ಆಸೀಸ್‌ ಅಬ್ಬರಕ್ಕೆ ಬ್ರೇಕ್‌ ಹಾಕಿದ್ದರು.

270 ರನ್ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಸ್ಪೋಟಕ ಆಟ ಆಡಲು ಮುಂದಾದರು, 30 ರನ್ ಗಳಿಸಿ ಔಟಾದರು. ಅವರಿಗೆ ಸಾಥ್ ನೀಡಿದ ಆರಂಭಿಕ ಆಟಗಾರ ಶುಭಮನ್ ಗಿಲ್ 37 ರನ್ ಗಳಿಸಿದ್ದ ವೇಳೆ ಝಂಪಾಎಸೆದ ಚೆಂಡಿಗೆ ಎಲ್ಬಿಡಬ್ಲ್ಯೂ ಗೆ ನಿರ್ಗಮಿಸಿದರು. ಆ ಬಳಿಕ ಬಂದ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿ ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸಿದರು. 54 ರನ್ ಆಗುವ ವೇಳೆ ಔಟಾದರು. ಕೆಎಲ್ ರಾಹುಲ್ 32, ಅಕ್ಷರ್ ಪಟೇಲ್ 2 ಗಳಿಸಿದ್ದ ವೇಳೆ ರನ್ ಔಟ್ ಆದರು. ನಿರೀಕ್ಷೆ ಇರಿಸಿದ್ದ ಹಾರ್ದಿಕ್ ಪಾಂಡ್ಯ 40 ರನ್ ಗಳಿಸಿದ್ದ ವೇಳೆ ಝಂಪಾ ಎಸೆದ ಚೆಂಡನ್ನು ಸ್ಟೀವನ್ ಸ್ಮಿತ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು. ಮತ್ತೊಮ್ಮೆ ವಿಫಲರಾದ ಸೂರ್ಯ ಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದರು.ರವೀಂದ್ರ ಜಡೇಜಾ 18 ರನ್ ಗೆ ಔಟಾದ ಬಳಿಕ ಭಾರತ ತಂಡದ ಗೆಲುವಿನ ಭರವಸೆ ಹುಸಿಯಾಯಿತು.49.1ಓವರ್ ಗಳಲ್ಲಿ 248 ರನ್ ಗಳಿಗೆ ರೋಹಿತ್ ಪಡೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.

Leave a Comment

Your email address will not be published. Required fields are marked *