ಪಾವಗಡದಲ್ಲಿ ರಸ್ತೆ ಅಪಘಾತ; ಸುಳ್ಯದ ಯುವಕ ಮೃತ್ಯು

ಸಮಗ್ರ ನ್ಯೂಸ್: ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸುಳ್ಯದ ಯುವಕ ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ.

Ad Widget ... ..

ಸುಳ್ಯ ಕೇರ್ಪಳ ಮೂಲದ ಪ್ರಜ್ವಲ್ ಎಂಬ ಯುವಕ ಮೃತಪಟ್ಟ ಯುವಕ. ಈತ ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಎಂಬವರ ಪುತ್ರ ಪ್ರಜ್ವಲ್ ಪಾವಗಡದಲ್ಲಿ ಟೋಲ್‌ ಸುಪರ್‌ವೈಸ‌ರ್ ಆಗಿ ಕೆಲಸದಲ್ಲಿದ್ದರು.

Ad Widget

ನಿನ್ನೆ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ತಲೆ ರಸ್ತೆಗೆ ಬಡಿಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತ ಪ್ರಜ್ವಲ್ ತಂದೆ, ತಾಯಿ, ಹಾಗೂ ಸಹೋದರಿಯನ್ನು ಅಗಲಿದ್ದು, ಮನೆಗೆ ಆಧಾರವಾಗಿದ್ದ‌ ಏಕೈಕ ಪುತ್ರನನ್ನು ಕಳೆದುಕೊಂಡ ಕುಟುಂಬಸ್ಥರ‌ ಆಕ್ರಂದನ ಮುಗಿಲುಮುಟ್ಟಿದೆ.

Leave a Comment

Your email address will not be published. Required fields are marked *