Ad Widget .

ಇಂಥವರ ಕಾಲಿಗೆ ಬಿದ್ದರೆ ಶುಭಫಲ ದೊರಕದು| ಆಚಾರ್ಯ ಚಾಣಕ್ಯರ ಪ್ರಕಾರ ಈ ಪದ್ದತಿ ಬಹಳ ಒಳ್ಳೆಯದು

ಸಮಗ್ರ ನ್ಯೂಸ್: ಭಾರತೀಯ ಸಂಸ್ಕೃತಿಯಲ್ಲಿ ಗುರುಹಿರಿಯರನ್ನು ಗೌರವಿಸುವ ಪದ್ಧತಿ ಇದೆ. ಹಿರಿಯರ ಪಾದವನ್ನು ಸ್ಪರ್ಶಿಸಿ ಆಶೀರ್ವಾದವನ್ನು ಹಿಂದಿನಿಂದಲೂ ಪಡೆದುಕೊಳ್ಳುತ್ತಾ ಬಂದಿದ್ದೇವೆ. ಹಾಗಾದರೆ ಯಾವ ಮೂರು ವ್ಯಕ್ತಿಗಳ ಕಾಲಿಗೆ ಎಂದಿಗೂ ಬೀಳಬಾರದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ..‌

Ad Widget . Ad Widget .

ಆಚಾರ್ಯ ಚಾಣಕ್ಯರ ಪ್ರಕಾರ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡರೆ ಅವರ ಜ್ಞಾನ,ಬುದ್ಧಿ, ಪ್ರಸಿದ್ದಿ ಪ್ರಾಪ್ತಿಯಾಗುತ್ತದೆ. ವಿಜ್ಞಾನದ ಪ್ರಕಾರ ಈ ರೀತಿ ಹಿರಿಯರ ಕಾಲಿಗೆ ಬಿದ್ದು ನಮಸ್ಕರಿಸುವುದರಿಂದ ದೇಹದಲ್ಲಿ ರಕ್ತದ ಸಂಚಲನ ಆಗುತ್ತದೆ ಇದರಿಂದ ಹೃದಯ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ.

Ad Widget . Ad Widget .

ಬಿಳಿ ಅಕ್ಕಿ, ಸ್ವಲ್ಪ ತುಪ್ಪ, ನೀರು ಮತ್ತು ಅರಿಶಿನವನ್ನು ಸೇರಿಸಿ ಅಕ್ಷತೆ ಮಾಡಿಕೊಳ್ಳಬೇಕು. ಒಂದು ವೇಳೆ ಮನೆಯಿಂದ ಹೊರಗಡೆ ಹೋಗಬೇಕಾದರೆ ಮನೆಯಲ್ಲಿರುವ ಹಿರಿಯರಿಗೆ ಅಕ್ಷತೆಯನ್ನು ಕೊಟ್ಟು ಆಶೀರ್ವಾದವನ್ನು ಪಡೆದುಕೊಂಡು ಆ ಅಕ್ಷತೆಯನ್ನು ನಿಮ್ಮ ತಲೆ ಮೇಲೆ ಹಾಕಿಸಿಕೊಂಡು ಹೋಗಬೇಕು. ಈ ರೀತಿ ಮಾಡುವುದರಿಂದ ಅಂದುಕೊಂಡು ಮಾಡುವ ಕೆಲಸ ಯಶಸ್ವಿಯಾಗುತ್ತದೆ.

ಇನ್ನು ನಿಮ್ಮ ಜೇಬಿನಲ್ಲಿ ಕೆಂಪು ಅಕ್ಷತೆಯನ್ನು ಇಟ್ಟುಕೊಂಡು ಹೋಗುವುದರಿಂದ ನೀವು ಯಾವ ಕೆಲಸಕ್ಕೆ ಹೋಗುತ್ತೀರೋ ಅಲ್ಲಿ ಧನ ಆಕರ್ಷಣೆ ಆಗುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.

ಆಚಾರ್ಯ ಚಾಣಕ್ಯರ ಪ್ರಕಾರ, ದ್ರೋಹಿಗಳು, ಕಪಟ ಮನಸ್ಸಿನವರು, ವಂಚಕರು, ಹಣದಿಂದ ಶ್ರೀಮಂತರಾಗಿರುವವರು (ಅಧಿಕಾರ ಹೊಂದಿದವರು) ಹಾಗೂ ಒಳ್ಳೆಯ ಮನಸ್ಸನ್ನು ಹೊಂದದೆ ಇರುವವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡರೆ ಅದರಿಂದ ದೌರ್ಭಾಗ್ಯ ಬರುತ್ತದೆಯೇ ಹೊರತು ಯಾವುದೇ ರೀತಿಯ ಒಳ್ಳೆಯ ಶುಭಫಲಗಳು ಲಭಿಸುವುದಿಲ್ಲ ಎನ್ನುತ್ತಾರೆ.

1 thought on “ಇಂಥವರ ಕಾಲಿಗೆ ಬಿದ್ದರೆ ಶುಭಫಲ ದೊರಕದು| ಆಚಾರ್ಯ ಚಾಣಕ್ಯರ ಪ್ರಕಾರ ಈ ಪದ್ದತಿ ಬಹಳ ಒಳ್ಳೆಯದು”

Leave a Comment

Your email address will not be published. Required fields are marked *