ಬಾಯ್ಲರ್ ಬ್ಲಾಸ್ಟ್; ಮೂವರು ಗಂಭೀರ

ಸಮಗ್ರ ನ್ಯೂಸ್: ಬಾಯ್ಲರ್ ಸಿಡಿದು ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರು ನಗರದ ಅನೇಕಲ್ ನ ಬೊಮ್ಮಸಂದ್ರದಲ್ಲಿ ನಡೆದಿದೆ.

Ad Widget ... ..

ಬೊಮ್ಮಸಂದ್ರದ ಬಾಲ್ ಫಾರ್ಮ ಕಂಪನಿಯಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮ ಪ್ರದೀಪ್, ಮುರುಗನ್, ಕಿರಣ್ ಎಂಬ ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ.

Ad Widget

ಮೈ ಮೇಲೆ ಭಾರಿ ಪ್ರಮಾಣದ ಕೆಮಿಕಲ್ ಬಿದ್ದು ತೀವ್ರತರದ ಗಾಯಗಳಾಗಿದೆ. ಗಾಯಾಳುಗಳನ್ನು ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *