ಕೊಟ್ಟಿಗೆಹಾರ: ಮುಳ್ಳು ಹಂದಿ ಶಿಕಾರಿಗೆ ತೆರಳಿದ ಯುವಕರು ಸಾವು

ಸಮಗ್ರ ನ್ಯೂಸ್: ಮುಳ್ಳು ಹಂದಿ ಇದ್ದ ಸುರಂಗಕ್ಕೆ ಶಿಕಾರಿ ಮಾಡಲು ನುಗ್ಗಿ ಇಬ್ಬರು ಕೂಲಿಕಾರ್ಮಿಕರು ಸಾವನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಾಳಿಗನಾಡು ಎಂಬಲ್ಲಿ ಸಂಭವಿಸಿದೆ.

Ad Widget ... ..

ತಮಿಳುನಾಡು ಮೂಲದ ವಿಜಯ್ (28), ಶರತ್ (26) ಸಾವನ್ನಪ್ಪಿದ ಕೂಲಿಕಾರ್ಮಿಕರು. ಇವರು ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಮುಳ್ಳು ಹಂದಿ ಶಿಕಾರಿ ಮಾಡಲು ಗುಡ್ಡಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಹಂದಿ ಸುರಂಗದ ಒಳಗೆ ಹೊಗಿದ್ದು ತಕ್ಷಣ ಯುವಕರು ಸುರಂಗದ ಒಳಗೆ ಹೊಗೆ ಹಾಕಿ ಸುರಂಗದ ಒಳಗೆ ನುಗ್ಗಿದ ಪರಿಣಾಮ ಹೊಗೆಯಿಂದಾ ಉಸಿರಾಡಲು ಸಾಧ್ಯವಾಗದೆ ಗುಹೆಯೊಳಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Ad Widget

ಸ್ಥಳಕ್ಕೆ ಬಾಳೂರು ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್, ಪೊಲೀಸರು, ಮತ್ತು ಸ್ಥಳೀಯರು ಗುಹೆಯೊಳಗೆ ನುಗ್ಗಿ ಶವಗಳನ್ನು ಹೊರತೆಗೆಯಲಾಯಿತು.

ಮೂಡಿಗೆರೆ ತಾಲ್ಲೂಕಿನ ಬಾಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *