ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಮತ್ತೊಂದೆಡೆ ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳ ಓಡಾಟ ಜೋರಾಗಿದೆ. ಇಂತಹ ಸಂದರ್ಭದಲ್ಲೇ ಬೆಂಗಳೂರು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೊಲೆಗೆ ಕುಖ್ಯಾತ ರೌಡಿ ಗ್ಯಾಂಗ್ ಸ್ಕೆಚ್ ಹಾಕಿದ್ದ ಸ್ಫೋಟಕ ವಿಷಯ ಬಹಿರಂಗವಾಗಿದೆ.
ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಟೀಮ್ ಬೆಂಗಳೂರು ಶಾಸಕರ ಕೊಲೆಗೆ ಸ್ಕೆಚ್ ಹಾಕಿತ್ತು ಎನ್ನಲಾಗಿದೆ. ಶಾಸಕರ ಚಲನವಲನಗಳ ಬಗ್ಗೆ ನಿಗಾವಹಿಸಿದ್ದ ನಾಗ ಮತ್ತವರ ತಂಡ 2 ಕೋಟಿಗೆ ಸುಪಾರಿ ಪಡೆದುಕೊಂಡಿತ್ತು. ಆದರೆ ಈ ಅಟ್ಯಾಕ್ಗೂ ಮುಂಚೆ ರೌಡಿಶೀಟರ್ ನಾಗನ ಗ್ಯಾಂಗ್ನಿಂದಲೇ ವಿಷಯ ಲೀಕ್ ಆಗಿದೆ.
ಚಿತ್ರದುರ್ಗದಲ್ಲಿದ್ದ ನಾಗನ ಗ್ಯಾಂಗ್ನ ಆಕಾಶ್ ಕೊಲೆಯ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಎಂಎಲ್ಎ ಬೆಂಬಲಿಗ ಬೊಮ್ಮನಹಳ್ಳಿ ನಿವಾಸಿ ಚಂದ್ರು ಕರೆ ಮಾಡಿ ಕೇಳಿದಾಗ ಆಕಾಶ್ ಕೊಲೆಯ ಸಂಚು ನಡೆದಿರುವ ವಿಷಯ ಬಾಯ್ಬಿಟ್ಟಿದ್ದಾನೆ. ಆಕಾಶ್ ಆಡಿಯೋ ಮತ್ತು ರೌಡಿಗಳ ಫೋಟೋವನ್ನು ಇದೀಗ ಬೊಮ್ಮನಹಳ್ಳಿ ಪೊಲೀಸರಿಗೆ ನೀಡಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.