ಮತ್ತೆ ಅಭಿಮಾನಿಗಳ ಹೃದಯ‌ ಗೆದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್| ಈ ಬಾರಿ ಎದೆಯಲ್ಲೇ ಜಾಗ ಕೊಟ್ರಲ್ಲ ‘ಡಿ ಬಾಸ್’

ಸಮಗ್ರ ನ್ಯೂಸ್: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್‌ ಅವರು ಮೊದಲಿನಿಂದಲೂ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಅಂತ ಕರೆಯುತ್ತಿರುವುದನ್ನು ನಾವು ನೋಡಬಹುದು. ಹೀಗಾಗಿ ‘ಲವ್‌ ಯು ಸೆಲೆಬ್ರಟಿ’ ಅಂಥ ತಮ್ಮ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದು, ಈ ಮೂಲಕ ತಮ್ಮ ಸೆಲೆಬ್ರೆಟಿಗಳನ್ನು ಎದೆ ಮೇಲೆ ಹೊತ್ತಿಕೊಂಡು ಮೇರೆಸುತ್ತಿದ್ದಾರೆ.

Ad Widget ... ..

ತಮ್ಮ ಎದೆ ಮೇಲೆ ಹಾಕಿಸಿಕೊಂಡಿರುವ ಹಚ್ಚೆ ಫೋಟೋ ಮತ್ತು ವಿಡಿಯೋವನ್ನು ದರ್ಶನ್‌ ತಮ್ಮ ಟ್ವಿಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್‌ ಆಗುತ್ತಿದೆ. ದರ್ಶನ್‌ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಭಿಮಾನವನ್ನು ಕಂಡು ಹುಬ್ಬೆರಿಸುತ್ತಿದ್ದು, ಸಂಭ್ರಮಿಸುತ್ತಿದ್ದಾರೆ.

Ad Widget

ನಮ್ಮಲ್ಲಿ ನಟರ ಸಿನಿಮಾಗಳ ಹೆಸರನ್ನು ಇಲ್ಲವೇ ಅವರ ಹೆಸರನ್ನು ಮೈ ತುಂಬಾ ಹಚ್ಚೆ ಹಾಕಿಸಿಕೊಂಡು ಭಕ್ತಿಯನ್ನು ಮೆರೆಯುವುದನ್ನು ಕಾಣಬಹುದಾಗಿದೆ. ಆದರೆ ಈಗ ಇದಕ್ಕೆ ತದ್ವಿರುದ್ದವಾಗಿ ನಟ ದರ್ಶನ್‌ ಅವರು ತಮ್ಮ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದು, ಈಗ ಅದು ಎಲ್ಲೆಡೆ ಸದ್ದು ಮಾಡುತ್ತಿದೆ.

Leave a Comment

Your email address will not be published. Required fields are marked *