ಅಸಹಜ ಲೈಂಗಿಕ ಕ್ರಿಯೆ; ವರದಕ್ಷಿಣೆ ಕಿರುಕುಳ| ರಾಖಿ ಸಾವಂತ್ ಗಂಡ ಆದಿಲ್ ದುರಾನಿಗೆ ನ್ಯಾಯಾಂಗ ಬಂಧನ

ಸಮಗ್ರ ನ್ಯೂಸ್: ಇತ್ತೀಚೆಗಷ್ಟೇ ಮದುವೆಯಾದ ಬಾಲಿವುಡ್​ ನಟಿ ರಾಖಿ ಸಾವಂತ್​ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿದೆ. ಮೈಸೂರು ಮೂಲದ ಪತಿ ಆದಿಲ್​ ದುರಾನಿ ವಿರುದ್ಧ ಅಸಹಜ ಲೈಂಗಿಕ ಕ್ರಿಯೆ ಮತ್ತು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಆತನನ್ನು ಬಂಧಿಸಿರುವ ಮುಂಬೈ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Ad Widget ... ..

ನನ್ನ ಜೊತೆ ಬಲವಂತವಾಗಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಅಲ್ಲದೆ, ವರದಕ್ಷಿಣೆ ವಿಚಾರವಾಗಿ ಹಲ್ಲೆ ಮಾಡಿದ್ದು, ನನಗೆ ತಿಳಿಸದೇ ನನ್ನ ಫ್ಲ್ಯಾಟ್​ನಲ್ಲಿದ್ದ ಹಣ ಮತ್ತು ಆಭರಣಗಳನ್ನು ದೋಚಿದ್ದಾನೆ ಎಂದು ರಾಖಿ ಸಾವಂತ್​, ಆದಿಲ್​ ದುರಾನಿ ವಿರುದ್ಧ ದೂರು ದಾಖಲಿಸಿದ್ದಾಳೆ.

Ad Widget

ನನ್ನ ಜೀವನವನ್ನೇ ಹಾಳು ಮಾಡಿದ ಎಂದು ದೂರಿರುವ ರಾಖಿ ಸಾವಂತ್​, ನನ್ನೊಂದಿಗೆ ಮದುವೆ ಸಂಬಂಧ ಕಡಿದುಕೊಂಡು ತನ್ನ ಗರ್ಲ್​ಫ್ರೆಂಡ್​ ತನು ಜೊತೆ ವಾಸಿಸುತ್ತಿದ್ದನು ಎಂದು ರಾಖಿ ಆರೋಪ ಮಾಡಿದ್ದಾರೆ.

ಫೆ. 6ರಂದು ರಾಖಿ ದೂರು ನೀಡಿದ್ದು, ನಿನ್ನೆ ರಾತ್ರಿಯೇ ಆದಿಲ್​ ದುರಾನಿಯನ್ನು ಮುಂಬೈ ಪೊಲೀಸರು ಬಂಧಿಸಿದರು. ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಅಂಧೇರಿ ನ್ಯಾಯಾಲಯ ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

Leave a Comment

Your email address will not be published. Required fields are marked *