Ad Widget .

ಉತ್ತರಾಖಂಡ್, ಜೋಶಿಮಠದಲ್ಲಿ ಭಾರೀ ಭೂಕಂಪ‌ ಸಾಧ್ಯತೆ – NGRI

ಸಮಗ್ರ ನ್ಯೂಸ್: ಜೋಶಿಮಠ ಸೇರಿ ಉತ್ತರಾಖಂಡದಲ್ಲಿ ಭಾರಿ ಭೂಕಂಪ ಸಾಧ್ಯತೆ ಇದೆ ಎಂದು NGRI ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಭೂಕುಸಿತ ಸಂಭವಿಸಿದ್ದ ಜೋಶಿಮಠ ಸೇರಿದಂತೆ ಉತ್ತರಾಖಂಡ ರಾಜ್ಯದ ಹಲವೆಡೆ ಭವಿಷ್ಯದಲ್ಲಿ ಭಾರಿ ಭೂಕಂಪ ಸಂಭವಿಸಲಿದೆ ಎಂದು ಹೈದರಾಬಾದ್ ಮೂಲದ ಸಿಎಸ್ಐಆರ್-ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ(ಎನ್ ಜಿಆರ್ ಐ) ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಉತ್ತರಾಖಂಡವನ್ನು ಭೂಕಂಪ ವಲಯ ಎಂದು ಗುರುತಿಸಲಾಗಿದ್ದು, 9,000ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರುವ ಟರ್ಕಿ– ಸಿರಿಯಾದಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲೇ ಈ ಎಚ್ಚರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎನ್ಜಿಆರ್ಐನ ಭೂಕಂಪಶಾಸ್ತ್ರ ವಿಭಾಗದ ಹಿರಿಯ ವಿಜ್ಞಾನಿ ಡಾ. ಪೂರ್ಣಚಂದ್ರ ರಾವ್ ಅವರು, ‘ಉತ್ತರಾಖಂಡವು ಭೂಕಂಪನ ವಲಯದಲ್ಲಿ ಬರಲಿದ್ದು, ದೊಡ್ಡ ಭೂಕಂಪ ಸಂಭವಿಸುವ ಸಾಧ್ಯತೆ ಇದೆ’ಎಂದು ಹೇಳಿದ್ದಾರೆ.

Ad Widget . Ad Widget . Ad Widget .

1905ರಲ್ಲಿ ರಿಕ್ಟರ್ ಮಾಪಕದಲ್ಲಿ 8ಕ್ಕೂ ಅಧಿಕ ತೀವ್ರತೆಯ ಭೂಕಂಪ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಸಂಭವಿಸಿತ್ತು. 1943ರಲ್ಲಿ ಬಿಹಾರ–ನೇಪಾಳ ಗಡಿಯಲ್ಲೂ ಕಂಪನದ ಅನುಭವವಾಗಿತ್ತು. ಆದರೆ, ಶತಮಾನದಿಂದ ಉತ್ತರಾಖಂಡದಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ. ಆದರೆ ಹಾಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದ್ದು, ‘ಹಲವು ಅಧ್ಯಯನಗಳು, ಲೆಕ್ಕಾಚಾರಗಳು, ಹಿಮಾಚಲ ಮತ್ತು ನೇಪಾಳ ಸಮೀಪದ ಪ್ರದೇಶದಲ್ಲಿ ದೊಡ್ಡ ಭೂಕಂಪದ ಸಾಧ್ಯತೆಗಳು ಹೆಚ್ಚಿವೆ. ಅಂದರೆ, ಇಡೀ ಉತ್ತರಾಖಂಡ ಇದೇ ಪ್ರದೇಶದಲ್ಲಿ ಬರುತ್ತದೆ.

Leave a Comment

Your email address will not be published. Required fields are marked *