ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ| ಹಿರಿಯ ನಟ ಮಂದೀಪ್ ರೈ ಇನ್ನಿಲ್ಲ

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯ ನಟ ಮಂದೀಪ್ ರೈ (73) ಅವರು ತಡರಾತ್ರಿ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

Ad Widget ... ..

ಬೆಂಗಳೂರಿನ ಭೈರಸಂಧ್ರದ ನಿವಾಸದಲ್ಲಿ ಮಧ್ಯರಾತ್ರಿ 1.45 ರ ಸುಮಾರಿಗೆ ಮಂದೀಪ್ ರೈ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಇಂದು ಸಂಜೆ ಮಂದೀಪ್ ರಾಯ್ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

Ad Widget

ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಂದೀಪ್ ರಾಯ್ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಅನಂತ್ ನಾಗ್ ಹಾಗೂ ಶಂಕರ್ ನಾಗ್ ಜೊತೆ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟು ಮಿಂಚಿನ ಓಟ, ಬೆಂಕಿಯ ಬಲೆ, ಏಳು ಸುತ್ತಿನ ಕೋಟೆ, ಆಕಸ್ಮಿಕ, ರೇ, ಆಪ್ತ ರಕ್ಷಕ, ಅಮೃತಧಾರೆ, ಕುರಿಗಳು ಸಾರ್ ಕುರಿಗಳು ಸೇರಿದಂತೆ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Leave a Comment

Your email address will not be published. Required fields are marked *