ಸುಳ್ಯ: ಐಸಿಯು ನಲ್ಲಿದೆ ಅಂಬ್ಯುಲೆನ್ಸ್! ಸೂಕ್ತ ಚಿಕಿತ್ಸೆ ನೀಡಿ

ಸಮಗ್ರ ನ್ಯೂಸ್: ಸಾರ್ವಜನಿಕ ಸೇವೆಗೆಂದು ಮೀಸಲಾಗಿರುವ ಅಂಬ್ಯುಲೆನ್ಸ್ ಒಂದು ಸರಿಯಾದ ನಿರ್ವಹಣೆ ಇಲ್ಲದೆ ಪಾಳುಬಿದ್ದಿರುವ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಕಂಡುಬರುತ್ತಿದೆ.

Ad Widget ... ..

ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಲಭಿಸಲೆಂದು ಕೆಲವರ್ಷಗಳ ಹಿಂದೆ ಇಲ್ಲಿನ ಪಂಚಾಯತ್ ಗೆ ದಾನಿಗಳ ಸಹಾಯದಿಂದ ಅಂಬ್ಯುಲೆನ್ಸ್ ಒದಗಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆ ಮತ್ತು ಸರಿಯಾದ ವ್ಯವಸ್ಥೆಗಳಿಲ್ಲದೆ ಅಂಬ್ಯುಲೆನ್ಸ್ ತುರ್ತು ಪರಿಸ್ಥಿತಿಯಲ್ಲಿದೆ.

Ad Widget

ಇದುವರೆಗೂ ಈ ಅಂಬ್ಯುಲೆನ್ಸ್ ನಿಂದ ಯಾರಿಗೂ ಉಪಯೋಗ ಲಭಿಸದಿದ್ದು, ಸದಾಕಾಲವೂ ಪಂಕ್ಚರ್ ಸ್ಥಿತಿಯಲ್ಲಿ ತುಕ್ಕುಹಿಡಿಯುತ್ತಿದೆ. ಸಂಬಂಧಪಟ್ಟವರು ಇದಕ್ಕೆ ಸೂಕ್ತ ಚಿಕಿತ್ಸೆ ನೀಡುವಂತೆ ಓದುಗರೊಬ್ವರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *