Ad Widget .

ರೈಲ್ವೇ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ| 7914 ಹುದ್ದೆಗಳಿಗೆ ಅಧಿಸೂಚನೆ

ಸಮಗ್ರ ನ್ಯೂಸ್: ಭಾರತೀಯ ರೈಲ್ವೇಯಲ್ಲಿ ಭರ್ಜರಿ ಉದ್ಯೋಗಾವಕಾಶ ಮಾಡಿಕೊಡಲಾಗಿದ್ದು, ಅಧಿಸೂಚನೆ ಹೊರಡಿಸಲಾಗಿದೆ. ಕೇವಲ 10ನೇ ತರಗತಿ ವಿದ್ಯಾರ್ಹತೆಯೊಂದಿಗೆ ಉದ್ಯೋಗ ಪಡೆಯುವ ಅವಕಾಶವನ್ನ ಭಾರತೀಯ ರೈಲ್ವೇ ಈಗ ಒದಗಿಸುತ್ತಿದೆ. ಗ್ರೂಪ್ ಡಿ ಹುದ್ದೆಗಳ ಪ್ರಕಟಣೆಯ ನಂತ್ರ ಮತ್ತೊಂದು ಬೃಹತ್ ಅಧಿಸೂಚನೆಯನ್ನ ಬಿಡುಗಡೆ ಮಾಡಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇತ್ತೀಚಿನ ಅಧಿಸೂಚನೆಯ ಮೂಲಕ 7,914 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ದಕ್ಷಿಣ ಮಧ್ಯ ರೈಲ್ವೆ, ಆಗ್ನೇಯ ರೈಲ್ವೆ, ವಾಯುವ್ಯ ರೈಲ್ವೆ ನೇಮಕಾತಿಗಳನ್ನ ವಲಯಗಳಾದ್ಯಂತ ಮಾಡಲಾಗುತ್ತದೆ.

Ad Widget . Ad Widget . Ad Widget .

ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದರೊಂದಿಗೆ ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (NCVT) ಅಥವಾ ಸ್ಟೇಟ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (SCVT) ಪ್ರಮಾಣೀಕರಿಸಿದ ಐಟಿಐ ಪಾಸ್ ಪ್ರಮಾಣಪತ್ರವು ಅತ್ಯಗತ್ಯವಾಗಿರುತ್ತದೆ.
ವಯೋಮಿತಿ : ನೇಮಕಾತಿ ಮಂಡಳಿಯು ತಿಳಿಸಿರುವ ವಿವರಗಳ ಪ್ರಕಾರ, 15 ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ವಯಸ್ಸು ಜನವರಿ 1, 2023 ಕ್ಕೆ 24 ವರ್ಷಗಳನ್ನ ಮೀರಬಾರದು. ಅದೇ ರೀತಿ 15 ವರ್ಷ ಕಡಿಮೆ ಮಾಡಬಾರದು. ಕಾಯ್ದಿರಿಸಿದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ.

ಖಾಲಿ ಹುದ್ದೆಗಳ ವಿವರಗಳು:
ದಕ್ಷಿಣ ಮಧ್ಯ ರೈಲ್ವೆಯಲ್ಲಿ 4,103, ಆಗ್ನೇಯ ರೈಲ್ವೆಯಲ್ಲಿ 2,026 ಮತ್ತು ವಾಯುವ್ಯ ರೈಲ್ವೆಯಲ್ಲಿ 1,785 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನ ಸಲ್ಲಿಸಲು ಸೂಚಿಸಲಾಗಿದೆ. ಆಯಾ ವಲಯಗಳಲ್ಲಿನ ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸಲು, ಒಬ್ಬರು ಆಯಾ ಅಧಿಕೃತ ವೆಬ್ಸೈಟ್ಗಳನ್ನ ಸಂಪರ್ಕಿಸಬೇಕು.

ಆಯ್ಕೆ ಪ್ರಕ್ರಿಯೆ ಹೀಗಿದೆ:
ಈ ಹುದ್ದೆಗಳ ಆಯ್ಕೆಯಲ್ಲಿ ಶೈಕ್ಷಣಿಕ ಅರ್ಹತೆ ಪ್ರಮುಖವಾಗಿರುತ್ತದೆ. ಆಯ್ಕೆ ಪ್ರಕ್ರಿಯೆಯು ಮೆರಿಟ್ ಪಟ್ಟಿಯನ್ನು ಆಧರಿಸಿರುತ್ತದೆ. 10ನೇ ತರಗತಿ ಜತೆಗೆ ಐಟಿಯಲ್ಲಿ ಸಾಧನೆ ಮಾಡಿದವರನ್ನ ಆಯ್ಕೆ ಮಾಡಲು ಅವಕಾಶವಿರುತ್ತದೆ. ಈ ಎರಡರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಅಪ್ಲಿಕೇಶನ್ ಹಾಕುವ ವಿಧಾನ:
ದಕ್ಷಿಣ ಮಧ್ಯ ರೈಲ್ವೆ ವಲಯದ ಅಡಿಯಲ್ಲಿ 4,103 ಹುದ್ದೆಗಳಿಗೆ scr.indianrailways.gov.in ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ದಕ್ಷಿಣ ವಲಯದೊಳಗೆ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು, ಕೋಲ್ಕತ್ತಾವನ್ನು ಕೇಂದ್ರವಾಗಿಟ್ಟುಕೊಂಡು ಸೌತ್ ಈಸ್ಟರ್ನ್ ರೈಲ್ವೆಯಲ್ಲಿ 2,026 ಹುದ್ದೆಗಳಿಗೆ rrcser.co.inವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು 1,785 ಹುದ್ದೆಗಳನ್ನ ಹೊಂದಿರುವ ವಾಯುವ್ಯ ರೈಲ್ವೆ ವಲಯಕ್ಕೆ rrcjaipur.in ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆಬ್ರವರಿ 10 ರವರೆಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

Leave a Comment

Your email address will not be published. Required fields are marked *