ಸಮಗ್ರ ನ್ಯೂಸ್: ಯುವತಿಯೋರ್ವಳನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ. ಘಟನೆಯಿಂದ ಕೊಡಗಿನ ಜನರು ಬೆಚ್ಚಿಬಿದ್ದಿದ್ದಾರೆ.
ಕೊಲೆಯಾದ ಯುವತಿಯನ್ನು ವಿರಾಜಪೇಟೆ ತಾಲ್ಲೂಕಿನ ನಾಂಗಲ ಗ್ರಾಮದ ಬುಟ್ಟಿಯಂಡಪ್ಪ ಮಾದಪ್ಪ, ಸುನಂದ ಅವರ ಪುತ್ರಿ ಬುಟ್ಟಿಯಂಡ ಆರತಿ (24) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮನೆಯಿಂದ ಹೊರಗೆ ಕರೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಆರತಿ ಕೊಲೆಯಾದ ಸ್ಥಳದಲ್ಲಿ ವ್ಯಕ್ತಿಯೊಬ್ಬನ ಹೆಲ್ಮೆಟ್ ಪತ್ತೆ ಆಗಿದೆ. ಅದೇ ಗ್ರಾಮದ ತಮ್ಮಯ್ಯ ಎಂಬಾತನ ಹೆಲ್ಮೆಟ್ ಹಾಗೂ ಕೊಲೆಯಾದ ಅನತಿ ದೂರದಲ್ಲಿ ಆತನ ಬೈಕ್ ಪತ್ತೆ ಆಗಿದೆ.
ತಮ್ಮಯ್ಯ ಎಂಬಾತ ಮೂರು ದಿನಗಳಿಂದ ಆರತಿಗೆ ಟಾರ್ಚರ್ ನೀಡುತ್ತಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಭಾನುವಾರ ರಾತ್ರಿ ಈತನೇ ಹತ್ಯೆ ಮಾಡಿರುವ ಬಗ್ಗೆ ಅನುಮಾನ ಮೂಡಿದ್ದು, ತಮ್ಮಯ್ಯನ ಮೊಬೈಲ್ ಹಾಗೂ ಚಪ್ಪಲಿ ಕೊಲೆಯಾದ ಸ್ಥಳದಲ್ಲಿದೆ.
ಕೊಲೆಯಾದ ಅನತಿ ದೂರದಲ್ಲಿ ಬೈಕ್ ಕೂಡ ಪತ್ತೆ ಆಗಿದೆ. ಆರತಿಯ ಹತ್ಯೆ ಬಳಿಕ ತಮ್ಮಯ್ಯ ಕೂಡ ವಿಷ ಸೇವಿಸಿರುವ ಬಗ್ಗೆ ಅನುಮಾನ ಇದೆ. ಮದ್ಯದ ಜತೆಗೆ ವಿಷ ಸೇವಿಸಿರಬಹುದೆಂದು ಶಂಕಿಸಲಾಗಿದೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರ ಹುಡುಕಾಟ ನಡೆಸಿದ್ದು, ತಮ್ಮಯ್ಯಗೂ ಮೃತ ಆರತಿಗೂ ಏನು ಸಂಬಂಧ, ಯಾವ ಕಾರಣಕ್ಕೆ ಹತ್ಯೆ ಆಗಿರಬಹುದು ಎಂದು ತನಿಖೆ ಮುಂದುವರಿಸಿದ್ದಾರೆ,