ಹಾಸನ: ಹೆತ್ತ ಕಂದಮ್ಮಗಳಿಗೆ ವಿಷವುಣ್ಣಿಸಿ‌ ಆತ್ಮಹತ್ಯೆಗೆ ಯತ್ನಿಸಿದ ತಾಯಿ| ಒಂದು ಮಗು ಸಾವು; ಮತ್ತೊಂದರದ್ದು ಜೀವನ್ಮರಣ ಹೋರಾಟ|

ಸಮಗ್ರ ನ್ಯೂಸ್: ತಾಯಿಯೊಬ್ಬಳು ತನ್ನ ಮಕ್ಕಳಿಗೆ ಇಲಿ ಪಾಷಾಣ ತಿನ್ನಿಸಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ವಿಷ ಸೇವಿಸಿ ಮೂರೂವರೆ ವರ್ಷದ ಮೊಹಮ್ಮದ್ ಆರಾನ್ ಮೃತಪಟ್ಟಿದ್ದು, ಸುನೈನಾ ಎಂಬ 7 ವರ್ಷದ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.

Ad Widget ... ..

ವಿಷ ನೀಡಿದ ತಾಯಿ ಜೀನತ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತವರು ಮನೆಯವರು ತನ್ನನ್ನು ನೋಡಲು ಬರಲಿಲ್ಲ ಎಂಬ ಕಾರಣಕ್ಕೆ ಜೀನತ್ ತನ್ನ ಮಕ್ಕಳಿಗೆ ವಿಷ ನೀಡಿದ್ದಾಳೆ ಎಂದು ಜೀನತ್ ಒಪ್ಪಿಕೊಂಡಿದ್ದಾರೆ.

Ad Widget

ಆರೋಪಿ ಜೀನತ್ ಭಾನು ಉಪ್ಪಿನಂಗಡಿ ಮೂಲದವಳಾಗಿದ್ದು, ಈಕೆಯ ವಿರುದ್ಧ ಹಾಸನದ ಪೆನ್ಶನ್ ಮೊಹಲ್ಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *