ರಾತ್ರಿ‌ ಮದ್ಯ ಸೇವಿಸಿ ಮಲಗಿದಾತ ಬೆಳಿಗ್ಗೆ ಹೆಣವಾದ| ಕುಟುಂಬಸ್ಥರಿಂದ‌ ಬಾರ್‌ ಮುಂದೆ ಪ್ರತಿಭಟನೆ

ಸಮಗ್ರ ನ್ಯೂಸ್: ರಾತ್ರಿ ಮದ್ಯ ಸೇವಿಸಿದ ಯುವಕನೋರ್ವ ಬೆಳಗ್ಗೆ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ‌ತರೀಕೆರೆ ತಾಲೂಕಿನ ಕರಕುಚ್ಚಿ ಕಾಲನಿಯಲ್ಲಿ ನಡೆದಿರುವುದು ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಮಂಜುನಾಥ(29) ಎಂದು‌‌ ಗುರುತಿಸಲಾಗಿದೆ.

Ad Widget ... ..

ಇಲ್ಲಿನ ಬಾರ್ ನಲ್ಲಿ ಮದ್ಯ ಸೇವಿಸಿದ್ದೇ ಅವರ ಸಾವಿಗೆ ಕಾರಣ ಎಂದು ಆರೋಪಿಸಿ ಮೃತಪಟ್ಟ ಯುವಕನ ಕುಟುಂಬಸ್ಥರು ಬಾರ್ ಎದುರು ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು.

Ad Widget

ಈ ಹಿಂದೆಯೂ ಇದೇ ರೀತಿ ಮೂರ್ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಆದ್ದರಿಂದ ಕೂಡಲೇ ಬಾರ್ ಮುಚ್ಚುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *