Ad Widget .

”ನಿಮ್ಮ ತಾಯಿ ನಮ್ಮೆಲ್ಲರಿಗೂ ತಾಯಿ”| ಸಾಂತ್ವನದ ನುಡಿಯಲ್ಲಿ ಗದ್ಗದಿತರಾದ ಮಮತಾ ಬ್ಯಾನರ್ಜಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿ ಹೀರಾಬೆನ್‌ ಅವರ ಅಗಲಿಕೆಯ ನೋವಿನ ನಡುವೆಯೂ, ಅಂತ್ಯ ಸಂಸ್ಕಾರ ನೆರವೇರಿಸಿದ ಬಳಿಕ ವಿರಾಮವನ್ನೂ ತೆಗೆದುಕೊಳ್ಳದೆ, ಪಶ್ಚಿಮ ಬಂಗಾಳದಲ್ಲಿನ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಆನ್‌ಲೈನ್‌ ಮೂಲಕ ಭಾಗವಹಿಸಿದ್ದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗದ್ಗದಿತರಾಗಿ ಸಾಂತ್ವನ ಹೇಳಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

‘ನಿಮ್ಮ ತಾಯಿಯವರ ನಿಧನದ ಹಿನ್ನೆಲೆಯಲ್ಲಿ ನಾವೆಲ್ಲ ದುಃಖತಪ್ತರಾಗಿದ್ದೇವೆ. ಇದು ತಮಗೂ ವೈಯಕ್ತಿಕವಾಗಿ ಬಹು ದೊಡ್ಡ ನಷ್ಟ. ನಿಮ್ಮ ತಾಯಿ ನಮಗೆಲ್ಲರಿಗೂ ತಾಯಿ. ನನಗೂ ನನ್ನ ತಾಯಿಯ ನೆನಪಾಗುತ್ತಿದೆ. ತಾಯಿ ಹೀರಾಬೆನ್‌ ಅವರ ಅಗಲಿಕೆಯ ನೋವಿನ ನಡುವೆಯೂ, ಅಂತ್ಯ ಸಂಸ್ಕಾರ ನಡೆಸಿದ ಕೂಡಲೇ, ಈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುವ ಈ ಕಾರ್ಯಕ್ರಮದಲ್ಲಿ ಆನ್‌ಲೈನ್‌ ಮೂಲಕ ಭಾಗವಹಿಸಿದ್ದಕ್ಕೆ ಧನ್ಯವಾದಗಳು.

Ad Widget . Ad Widget . Ad Widget .

ಈ ದುಃಖದ ಸಂದರ್ಭದಲ್ಲಿ ನಿಮಗೆ ಹೇಗೆ ಸಾಂತ್ವನ ಹೇಳಬೇಕು ಎಂದು ತೋಚುತ್ತಿಲ್ಲ, ಎಲ್ಲರಿಗೂ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ಅವರು ಮೋದಿಯವರಿಗೆ ಕೈ ಮುಗಿದು ಭಾವಪೂರ್ಣವಾಗಿ ಹೇಳಿದರು. ಪ್ರತಿಯಾಗಿ ಮೋದಿಯವರೂ ನಮಿಸಿದರು.

Leave a Comment

Your email address will not be published. Required fields are marked *