ಸೊಸೆಯ ತಬ್ಬಿಕೊಂಡು ಕೊರೋನ ಅಂಟಿಸಿದಳು ಅತ್ತೆ

ತೆಲಂಗಾಣ: ಅತ್ತೆ-ಸೊಸೆ ಸಂಭಂದವೆಂದರೆ ಅದು ಹಾವು ಮುಂಗುಸಿಯ ಸಂಭಂದದಂತೆ ಎಂಬ ಮಾತು ಚಾಲ್ತಿಯಲ್ಲಿದೆ. ಆಧುನಿಕ ಕಾಲದಲ್ಲಿ ಅಂತೂ ಅತ್ತೆ-ಸೊಸೆ ವೈರತತ್ವವಿರದ ಕುಟುಂಬ ಕಾಣಸಿಗುವುದು ಬಹಳ ವಿರಳ. ಇದಕ್ಕೆ ಪುಷ್ಟಿ ಎಂಬಂತೆ ರಾಜ್ಯದಲ್ಲೊಂದು ಘಟನೆ ನಡೆದಿದೆ.

Ad Widget ... ..

ಸಿರಿಸಿಲ್ಲಾ ಜಿಲ್ಲೆಯ ಸುಮಾರಿಪೇಟಾ ಗ್ರಾಮದಲ್ಲಿ, ಸೊಸೆಯ ಮೇಲೆ ಕುಪಿತಗೊಂಡ ಸೊಂಕಿತೆ ಅತ್ತೆಯೊಬ್ಬಳು ಆಕೆಯನ್ನು ತಬ್ಬಿಕೊಂಡು ಸೋಂಕು ಅಂಟಿಸಿದ ಘಟನೆ ನಡೆದಿದೆ. ಹಿಂದಿನಿಂದಲೂ ಸೊಸೆಯ ಮೇಲೆ ಹಠ ಸಾಧಿಸುತ್ತಿದ್ದ ಅತ್ತೆ, ಕೋವಿಡ್ ಸೋಂಕಿಗೊಳಗಾಗಿ ಕ್ವಾರಂಟೈನ್ ನಲ್ಲಿದ್ದಳು. ಈ ಕಾರಣದಿಂದ ಸೊಸೆ ತನ್ನ ಮಕ್ಕಳನ್ನು ಹತ್ತಿರ ಸುಳಿಯಲು ಬಿಡುತ್ತಿಲ್ಲ, ಸರಿಯಾಗಿ ಆಹಾರ ಕೊಡುತ್ತಿಲ್ಲ ಎಂದು ಕೋಪಗೊಂಡ ಅತ್ತೆ ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು ಸೋಂಕು ಅಂಟಿಸಿದ್ದಾಳೆ. ನಂತರ ಸೊಸೆಯನ್ನು ಮನೆಯಿಂದ ಹೊರಗಟ್ಟಿದ್ದು, ಸೊಸೆ ತವರಿಗೆ ತೆರಳಿದ್ದಾಳೆ ಎನ್ನಲಾಗಿದೆ.

Ad Widget

Leave a Comment

Your email address will not be published. Required fields are marked *