ಹುಲಿ ದಾಳಿಗೆ ಮೂರು ಹಸುಗಳು ಬಲಿ|ಕಾಫಿನಾಡಲ್ಲಿ ಮುಂದುವರೆದ ಹುಲಿಯ ಅಟ್ಟಹಾಸ

ಸಮಗ್ರ ನ್ಯೂಸ್: ಕೊಟ್ಟಿಗೆಹಾರದ ಭಾರತಿಬ್ಯೆಲು ಕನ್ನಗೆರೆ ಕಣ್ಣ ಕಾಪಿ ಎಸ್ಟೇಟ್ ನಲ್ಲಿ ರಾತ್ರಿ ಸಮಯದಲ್ಲಿ ಹುಲಿ ಸುಮಾರು ಮೂರು ಹಸುಗಳನ್ನು ಬೇಟೆಯಾಡಿದ್ದು. ಅಲ್ಲದೆ ಒಂದು ಕರುವನ್ನು ಬೇಟೆಯಾಡಿದ ಘಟನೆ ನಡೆದಿದೆ.

. Ad Widget . Ad Widget

ಇವುಗಳಲ್ಲಿ ಒಂದು ಹಸು ಜೀವ ಉಳಿಸಿಕೊಂಡು ಕನ್ನಗೆರೆ ಗ್ರಾಮಕ್ಕೆ ಓಡಿ ಬಂದಿದ್ದು ಇನ್ನೆರಡು ಹಸುಹಾಗು ಒಂದು ಕರು ಪ್ರಾಣ ಬಿಟ್ಟಿದ್ದು ಒಂದನ್ನು ಬಾಗಶಂ ತಿಂದಿದೆ. ಅದರಲ್ಲಿ ಒಂದು ಹಸು ಗರ್ಭ ಧರಿಸಿದ್ದು ಹೊಟ್ಟೆಯಿಂದ ಕರವನ್ನು ಹೊರಹಾಕಿ ತಿಂದಿರುವ ಭಯಾನಕ ದೃಶ್ಯವನ್ನು ಗ್ರಾಮಸ್ಥರು ಕಂಡು ಬೆಚ್ಚಿಬಿದ್ದಿದ್ದು.

. Ad Widget . . Ad Widget . Ad Widget

ಈ ಭಾಗದಲ್ಲಿ ಕಳೆದ ಕೆಲವು ದಿವಸಗಳಿಂದ ಎರಡು ಹುಲಿಗಳು ಸಂಚರಿಸುತ್ತಿದ್ದು. ಕೂಡಲೇ ಜೀವಹಾನಿ ಸಂಭವಿಸುವ ಮುಂಚೆ ಈ ಹುಲಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಅಗ್ರಹಿಸಿದ್ದಾರೆ.

ಉಪವಲಯ ಅರಣ್ಯ ಅಧಿಕಾರಿ ಉಮೇಶ್, ಅರಣ್ಯ ರಕ್ಷಕ ಮೋಹಸೀನ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *