ಸಮಗ್ರ ನ್ಯೂಸ್: ರಾಜ್ಯದ ಶಾಲೆಗಳಲ್ಲಿ ಖಾಲಿ ಇದ್ದ 15,000 ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿ, ಪರೀಕ್ಷೆಯ ಬಳಿಕ ದಾಖಲಾತಿಯ ಪರಿಶೀಲನೆ ಕೂಡ ನಡೆಸಲಾಗಿತ್ತು. ಇದೀಗ ಮುಂದುವರೆದು 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಈ ವಾರ ಪ್ರಕಟಿಸಲಾಗುತ್ತಿದೆ.
ಈ ಕುರಿತಂತೆ ಟ್ವಿಟ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಸಂಬಂಧಿಸಿದ 1:1 ‘ತಾತ್ಕಾಲಿಕ ಆಯ್ಕೆ’ ಪಟ್ಟಿಯನ್ನು ಈ ವಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆ ನಂತ್ರ, ನೇಮಕಾತಿಯಲ್ಲಿ ಅರ್ಹತೆಯನ್ನು ಪಡೆದಂತ ಅಭ್ಯರ್ಥಿಗಳ ಪಟ್ಟಿಯನ್ನು ಶಿಕ್ಷಣ ಇಲಾಖೆಯಿಂದ ಪ್ರಕಟಿಸಲಾಗಿತ್ತು. ಅದರಂತೆ 1:5 ಅನುಪಾತದಲ್ಲಿ ದಾಖಲಾತಿ ಪರಿಶೀಲನೆ ಕೂಡ ನಡೆಸಿ, ಮುಕ್ತಾಯಗೊಳಿಸಲಾಗಿತ್ತು. ಈಗ ಇದರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಈ ವಾರ ಪ್ರಕಟಿಸಲಾಗುತ್ತಿದೆ.